Sunday, January 26, 2020

ಮಳೆಗಾಲದಲ್ಲಿ ದ್ವೀಪವಾಗುವ ಪರಿಸ್ಥಿತಿಯಲ್ಲಿ ಕಗ್ಗುಂಡಿ! ಕಳಸ ಹೋಬಳಿಯ ಇಡಕಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಊರು.

ದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಇಡಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಗ್ಗುಂಡಿ ಎಂಬ ಊರು. ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಭಾಗದ ಹಲವು ಪ್ರದೇಶಕ್ಕೆ ಅಪಾರ ಹಾನಿಯಾಗಿತ್ತು. ಅದರಲ್ಲೂ ಮುಖ್ಯವಾಗಿ ನಗರಕ್ಕೆ ಸಂಪರ್ಕಿಸುವ ರಸ್ತೆಗೆ ಸಂಪೂರ್ಣ ಹನಿಯಾಗಿ ಆ ರಸ್ತೆ ಓಡಾಡಲು ಯೋಗ್ಯವಾಗದ ರೀತಿಯಲ್ಲಿ ಇತ್ತು.ಮಕ್ಕಳು ಶಾಲೆಗೆ ಹೋಗಬೇಕಾದ ಕಾರಣ ಮತ್ತು ಅಲ್ಲಿನ ನಿವಾಸಿಗಳು ತುರ್ತುಪರಿಸ್ಥಿತಿಯಲ್ಲಿ ಪಟ್ಟಣಕ್ಕೆ ಹೋಗಬೇಕಾಗಿದ್ದ ಕಾರಣ ಆ ರಸ್ತೆಯನ್ನು ಅವರೇ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರು. ಪ್ರಕೃತಿ ವಿಕೋಪ ಸಂಭವಿಸಿ ಸುಮಾರು 5 ತಿಂಗಳು ಕಳೆದರೂ ಆ ರಸ್ತೆ ದುರಸ್ತಿ ಕೆಲಸದ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಇದುವರೆಗೂ ಗಮನಹರಿಸಿಲ್ಲ. ಹಲವು ಬಾರಿ ಈ ಸಮಸ್ಯೆಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಕೂಡ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಯಾವುದೇ ಭರವಸೆಯನ್ನು ನೀಡಿಲ್ಲ. ಇನ್ನು 3-4 ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು ಆ ಸಮಯದ ಒಳಗೆ ರಸ್ತೆ ದುರಸ್ತಿ ಕಾರ್ಯ ಮಾಡದೆ ಇದ್ದಲ್ಲಿ ಪುನಃ ರಸ್ತೆ ಕುಸಿಯುವ ಸಾಧ್ಯತೆ ಇದೆ.ಹಾಗಾದಲ್ಲಿ ಇಲ್ಲಿರುವ ಮನೆಗಳಿಗೆ ರಸ್ತೆ ಸಂಪರ್ಕ ಕಡಿದು ದ್ವಿಪದಂತಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಗ್ಗುಂಡಿಯ ನಿವಾಸಿಯಾದ ರೂಪ ಗುರುಮೂರ್ತಿಯವರು ಆತಂಕ ವ್ಯಕ್ತಪಡಿಸಿದ್ದಾರೆ. ಪುನಃ ರಸ್ತೆ ಕುಸಿದರೆ ನಮಗೆ ಓಡಾಡಲು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸಲು ತುಂಬಾ ತೊಂದರೆಯಾಗಲಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದರೆ ಮುಂಬರುವ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಗ್ಗುಂಡಿ ನಿವಾಸಿಗಳು ಮಲ್ನಾಡ್ ವಾಣಿಗೆ ತಿಳಿಸಿದ್ದಾರೆ.


FOLLOW US ON-

Monday, January 20, 2020

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ....... ಆತಂಕದಲ್ಲಿ ಮಂಗಳೂರಿಗರು ರಾಜ್ಯಾದ್ಯಂತ ಹೈ ಅಲರ್ಟ್


ಇಂದು ಬೆಳಗ್ಗೆ ಆಟೋ ಮುಖಾಂತರ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಉಗ್ರಗಾಮಿಯೊಬ್ಬ ಒಂದು ಸಜೀವ ಬಾಂಬ್ ಇದ್ದ ಲ್ಯಾಪ್​ಟಾಪ್​ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದು, ಹೀಗಾಗಿ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತದನಂತರ ಸಾರ್ವಜನಿಕರು ಆ ಬ್ಯಾಗ್ ನಲ್ಲಿ ಬಾಂಬ್ ಇರಬಹುದೆಂದು ಊಹಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಾಚರಣೆಗೆ ಇಳಿದ ಮಂಗಳೂರು ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಆ ಅನುಮಾನಾಸ್ಪದ ಬ್ಯಾಗ್ ನಲ್ಲಿ ಬಾಂಬ್ ಇರುವದನ್ನು ಖಚಿತ ಪಡಿಸಿಕೊಂಡ ಅಧಿಕಾರಿಗಳು ತಕ್ಷಣವೇ ಬಾಂಬ್ ನಿಷ್ಕ್ರಿಯಗೊಳಿಸುವ ವಾಹನ ತರಿಸಿಕೊಂಡು ಆ ಬ್ಯಾಗ್ ಅನ್ನು ಬಾಂಬ್ ನಿಷ್ಕ್ರಿಯಗೊಳಿಸುವ ವಾಹನದೊಳಗೆ ಇಡಲಾಯಿತು ನಂತರ ಬೆಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿಯೊಂದಿಗೆ ಅದನ್ನು ಮಂಗಳೂರಿನ ಹೊರವಲಯದ ಕೆಂಜಾರು ಮೈದಾನದಲ್ಲಿ ಐಇಡಿ  ಬಾಂಬ್ ಅನ್ನು ನಿಷ್ಕ್ರಿಯ ಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಡಿದೆ.ನಗರದ ಪೊಲೀಸ್ ಆಯುಕ್ತ ಡಾ. ಹರ್ಷ ಸೇರಿದಂತೆ ಹಲವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.


Sunday, January 19, 2020

ಇಡಕಣಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ ಪ್ರಕಟ...... ಎಂ.ಪಿ. ಗಿರೀಶ್ ಬಣಕ್ಕೆ ಭರ್ಜರಿ ಗೆಲುವು.



ಇಡಕಣಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ ಪ್ರಕಟ. ಎಂ.ಪಿ. ಗಿರೀಶ್ ಬಣಕ್ಕೆ ಭರ್ಜರಿ ಗೆಲುವು.

ತೀವ್ರ ಕುತೂಹಲದಿಂದ ಕೂಡಿದ್ದ ಇಡಕಣಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ ನಿನ್ನೆ ತಡರಾತ್ರಿ ಪ್ರಕಟಗೊಂಡಿದೆ.ಸಣ್ಣಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಚುನಾವಣೆ ಮತ್ತು ಫಲಿತಾಂಶ ಪ್ರಕಟದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಘಟಾನುಘಟಿಗಳ ಪ್ರತಿಷ್ಠೆಯ ಕಣವಾಗಿದ್ದರಿಂದ ಮುಂಚಾಗೃತ ಕ್ರಮವಾಗಿ ಒಂದು ಕೆ.ಎಸ್.ಆರ್.ಪಿ ತುಕುಡಿಯನ್ನು ನಿಯೋಜಿಸಲಾಗಿತ್ತು.

ಈ ಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿ ಗೆ ಪ್ರತಿಷ್ಠೆಯ ಕಣವಾಗಿತ್ತು ಕಳೆದ 5 ವರ್ಷದಿಂದ ಸಹಕಾರ ಸಂಘದಲ್ಲಿ ಹತೋಟಿ ಸಾಧಿಸಿದ್ದ ಬಿಜೆಪಿಯ ಎಂ.ಪಿ. ಗಿರೀಶ್  ಮತ್ತು ಕಾಂಗ್ರೆಸ್ ನ ಬೆಂಬಲಿತ ಅಭ್ಯರ್ಥಿಗಳ ಪರ ಇದ್ದ ಕೆ.ಆರ್.ಪ್ರಭಾಕರ ಗೌಡ ಅವರ ಪ್ರತಿಷ್ಠೆಯ ಚುನಾವಣೆ ಕೂಡ ಇದಾಗಿತ್ತು. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ  ಎಂ.ಪಿ. ಗಿರೀಶ್ ಬಣ ಮೇಲುಗೈ ಸಾಧಿಸಿದೆ. ಗಿರೀಶ್ ಬಣದಿಂದ 12 ಅಭ್ಯರ್ಥಿಗಳ್ಳಲಿ 11 ಜನ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. 

ಪ್ರತಿಸ್ಪರ್ಧಿ ವಿಶ್ವನಾಥ್  ಬಣದಿಂದ ಕೇವಲ ಒಬ್ಬ ಅಭ್ಯರ್ಥಿ (ಸಾಲೇತರ ಕ್ಷೇತ್ರದಿಂದ) ಮಾತ್ರ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಕಳಸ ಹೋಬಳಿಯ ಬಿಜೆಪಿಯ ಅಧ್ಯಕ್ಷರಾದ ಗಿರೀಶ್ ಅವರು ತಮ್ಮ ಪ್ರಭಾವವನ್ನು ಸಾಭೀತು ಪಡಿಸಿದ್ದಾರೆ.

Thursday, January 16, 2020

ಸೂರ್ಯನ ಪತ ಮಕರ ರಾಶಿಯತ್ತ.

Click on the below image to see NEWS.


Wednesday, January 15, 2020

ಹುಲುಗಾರಗದ್ದೆ ಕಾಲು ಸೇತುವೆಗೆ ಬೇಕಿದೆ ಮುಕ್ತಿ.....ಶಾಸಕರೆ ಇತ್ತ ಗಮನ ಹರಿಸಿ.





    ಹೊರನಾಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುಲುಗಾರಗದ್ದೆ ಬಳಿ ಇರುವ ಕಾಲುಸೇತುವೆ ತೀರಾ ದುಃಸ್ಥಿತಿಯಲ್ಲಿದೆ. ಕಳೆದ ಮಳೆಗಾಲದಲ್ಲಿ ಸುರಿದ ಭೀಕರ ಮಳೆಗೆ ಸೇತುವೆಯ ಮೇಲೆ ನೀರು ಹರಿದು ಸೇತುವೆ ಶಿಥಿಲಗೊಂಡಿದ್ದು, ಸೇತುವೆ ಅಪಾಯದ ಸ್ಥಿತಿಯಲ್ಲಿ ಇದೆ. ಈ ಸೇತುವೆಯಲ್ಲೇ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಇದೆ ಹಾಗೂ ಸಾರ್ವಜನಿಕರು ಕೂಡ ಈ ಸೇತುವೆಯಲ್ಲೇ ಓಡಾಡುವ ಪರಿಸ್ಥಿತಿ ಇದೆ. ಪಟ್ಟಣಕ್ಕೆ ಹೋಗಲು ಈ ಸೇತುವೆ ಬಿಟ್ಟು ಬೇರೆ ಯಾವುದೇ ದಾರಿ ಕೂಡ ಇಲ್ಲವಾಗಿದ್ದು ಮುಂದಿನ ಮಳೆಗಾಲದಲ್ಲಿ ಹೇಗೆ ಸಂಚರಿಸುವುದು ಎಂಬ ಚಿಂತೆಯಲ್ಲಿ ಸಾರ್ವಜನಿಕರು ಮುಳುಗಿದ್ದಾರೆ. ಆದ್ದರಿಂದ ಮಾನ್ಯ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಕ್ಷೇತ್ರದ ಶಾಸಕರದ ಎಮ್. ಪಿ.ಕುಮಾರಸ್ವಾಮಿ ಅವರು ಈ ಬಗ್ಗೆ ಗಮನಹರಿಸಿ ಶೀಘ್ರವಾಗಿ ಇದಕ್ಕೊಂದು ಪರಿಹಾರ ಒದಗಿಸಬೇಕೆಂದು ಸ್ಥಳೀಯರಾದ ದಿನೇಶ್ ಅವರು ಆಗ್ರಹಿಸಿದ್ದಾರೆ.

Monday, January 13, 2020

ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ..... ತಂಡಕ್ಕೆ ರೋಹಿತ್ ಪುನರಾಗಮನ



ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಭಾರತದ ಟಿ20 ತಂಡವನ್ನು ಆಯ್ಕೆ ಮಾಡಲಾಗಿದ್ದು ರೋಹಿತ್ ಮತ್ತು ಶಮಿ ತಂಡಕ್ಕೆ ವಾಪಸಾಗಿದ್ದಾರೆ. ಭಾರತ ತಂಡ ಜನವರಿ 20ರಂದು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಐದು ಟಿ20, ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ.

ಭಾರತ ತಂಡ 
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಕೆ. ಎಲ್‌. ರಾಹುಲ್‌, ಶಿಖರ್‌ ಧವನ್‌, ಶ್ರೇಯಸ್‌ ಐಯರ್, ಮನೀಷ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್‌ ಠಾಕೂರ್‌.

ಐಸಿಸಿ ಮಹಿಳಾ ವಿಶ್ವಕಪ್ ಗೆ ಭಾರತ ತಂಡ ಪ್ರಕಟ....ವೇದಾ ಮತ್ತು ರಾಜೇಶ್ವರಿ ಗೆ ಒಲಿದ ಅದೃಷ್ಟ

ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ಗೆ ಭಾರತ ತಂಡವನ್ನು ಪ್ರಕಟಮಾಡಲಾಗಿದ್ದು ಹರ್ಮನ್ ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಬಾರಿ ಪ್ರಕಟವಾದ ತಂಡದಲ್ಲಿ ಇಬ್ಬರು ಕರ್ನಾಟಕದ  ಆಟಗಾರ್ತಿಯರಿಗೆ ಸ್ಥಾನ ದೊರೆತಿದೆ. ರಾಜೇಶ್ವರಿ ಗಾಯಕ್ವಾಡ್ ಮತ್ತು ವೇದಾ ಕೃಷ್ಣಮೂರ್ತಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.





Sunday, January 12, 2020

ಮಲೆನಾಡಿಗರ ನಿದ್ದೆಗೆಡಿಸುತ್ತಿರುವ ಕಸ್ತೂರಿ ರಂಗನ್ ವರದಿ!!!

"ನಮ್ಮ ಪೂರ್ವಜರು ಉಳಿಸಿ, ಬೆಳೆಸಿಕೊಂಡು ಬಂದಿರುವ ಅರಣ್ಯವನ್ನು ರಕ್ಷಿಸುವುದು ನಮಗೆ ಗೊತ್ತು, ನಮ್ಮ ಪೂರ್ವಜರ ಕಾಲದಲ್ಲಿ ಇದ್ದ ಕಾಡನ್ನು ನಾವೂ ಇನ್ನೂ ಕೂಡ ಸಂರಕ್ಷಿಸಿಕೊಂಡು ಬಂದಿದ್ದೇವೆ ಮುಂದೆ ಕೂಡ ಹೀಗೆ ಸಂರಕ್ಷಣೆ ಮಾಡಿಕೊಂಡು ಹೋಗುವುದು ನಮಗೆ ಗೊತ್ತು ಇದಕ್ಕೆ ಯಾವ ಯೋಜನೆ ಕೂಡ ನಮಗೆ ಬೇಡ ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡಿ ಅಷ್ಟೇ ಸಾಕು"
 ಕಸ್ತೂರಿ ರಂಗನ್ ವರದಿ ಎಂದೊಡನೆ ಚಳಿಗಾಲದಲ್ಲೂ ಕೂಡ ಮಲೆನಾಡಿಗರು ಬೆವರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ  ಮತ್ತು ಅಡಿಕೆಗೆ ತಗಲಿರುವ ಕೊಳೆರೋಗ ಇದೆಲ್ಲದರ ನಡುವೆ ಮಲೆನಾಡಿನ ಜನರಿಗೆ ಮತ್ತೊಂದು ಆಘಾತಕಾರಿ ವಿಷಯವೆಂದರೆ ಅದೇ ಈ ಕಸ್ತೂರಿ ರಂಗನ್ ವರದಿ.
ಹಲವಾರು ವರ್ಷಗಳಿಂದಲೂ ಪಶ್ಚಿಮಘಟ್ಟ ಮತ್ತು ಮಲೆನಾಡು ಭಾಗದವರು ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುತ್ತಾ ಬಂದಿದ್ದರೂ ಕೂಡ ಪರಿಸರ ಪ್ರೇಮಿಗಳು ಎಂದು ಕರೆಸಿಕೊಳ್ಳುವವರು ವರದಿ ಜಾರಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ವರದಿ ಜಾರಿಯಾದರೆ ಮೂಲಭೂತ ಸೌಕರ್ಯಗಳ ಕೊರತೆ , ಕೃಷಿ ಚಟುವಟಿಕೆಗಳ ಮೇಲಿನ ನಿರ್ಬಂಧ ಹೀಗೆ ಹಲವು ಕಾರಣಗಳಿಂದಾಗಿ ಮಲೆನಾಡು ಮತ್ತು ಪಶ್ಚಿಮಘಟ್ಟದ ಭಾಗದಲ್ಲಿ ಜೀವನ ನಡೆಸುವುದು ಕೂಡ ಕಷ್ಟವಾಗುತ್ತದೆ ಎಂಬುವುದು ಈ ಭಾಗದವರ ಅಳಲವಾಗಿದೆ. ಅದರೆ ವರದಿ ಜಾರಿಯಾಗದೆ ಇದ್ದರೆ ಕಾಡು ಮತ್ತು ಕಾಡು ಪ್ರಾಣಿಗಳ ಉಳಿವು ಅಸಾಧ್ಯ ಎಂಬುವುದು ಪರಿಸರವಾದಿಗಳ ವಾದವಾಗಿದೆ.
ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲವು ರಾಜಕಾರಣಿಗಳು ಇದನ್ನೇ ತಮ್ಮ ಬಂಡವಾಳ ವಾಗಿಸಿಕೊಂಡು ತಮಗೆ ಅನುಕೂಲವಾಗುವಂತೆ ಇದರ ಬಗ್ಗೆ ಮಾತನಾಡುತ್ತಿದ್ದಾರೆ.
ಹಾಗಾದರೆ ಕಸ್ತೂರಿ ರಂಗನ್ ವರದಿಯಲ್ಲಿ ಅಂತದ್ದೇನಿದೆ ತಿಳಿದುಕೊಳ್ಳೋಣ ಬನ್ನಿ.
ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ 2012 ರ ಆಗಸ್ಟ್ 17 ರಂದು ಕೇಂದ್ರ ಸರ್ಕಾರ ಒಂದು ತಂಡ ರಚನೆಮಾಡಿ ವರದಿ ನೀಡುವಂತೆ ಕಸ್ತೂರಿ ರಂಗನ್ ಅವರಿಗೆ ಸೂಚಿಸಲಾಯಿತು. ಅದರಂತೆ ಅವರ ನೇತೃತ್ವದ ತಂಡ 2013 ಏಪ್ರಿಲ್ 15 ರಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿನ ಹಲವು ಅಂಶಗಳು ಪಶ್ಚಿಮಘಟ್ಟದ ಹಾಗೂ ಮಲೆನಾಡಿನ ಜನರಿಗೆ ಮಾರಕವಾಗಿದೆ ಎಂದು ಈ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಸ್ತೂರಿ ರಂಗನ್ ವರದಿಯ ಪ್ರಮುಖ ಅಂಶಗಳು:
ಈ ವರದಿಯಲ್ಲಿ ಮುಖ್ಯವಾಗಿ ಅರಣ್ಯ ಪ್ರದೇಶ ಹೆಚ್ಚಾಗಿರುವ ಪ್ರದೇಶಗಳನ್ನು ಗುರುತಿಸಲಾಗಿದೆ.
ಈ ವರದಿಯಲ್ಲಿ ಮುಖ್ಯವಾಗಿ 2 ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಸಾಂಸ್ಕೃತಿಕ ಭೂ ಪ್ರದೇಶ ಮತ್ತು ನೈಸರ್ಗಿಕ ಭೂ ಪ್ರದೇಶ 
ಸಾಂಸ್ಕೃತಿಕ ಭೂ ಪ್ರದೇಶ ಎಂದರೆ ನಗರ ಪ್ರದೇಶ ಮತ್ತು ಹೆಚ್ಚು ಜನರು ವಾಸಿಸುವ ಪ್ರದೇಶವನ್ನು ಸಾಂಸ್ಕೃತಿಕ ಭೂ ಪ್ರದೇಶ ಎಂದು ಗುರುತಿಸಲಾಗಿದೆ ಈ ಭೂ ಪ್ರದೇಶವು ಕಸ್ತೂರಿ ರಂಗನ್ ವರದಿಯಲ್ಲಿ ಶೇಕಡಾ 63% ಭಾಗವನ್ನು ಗುರುತಿಸಲಾಗಿದೆ. ಇಲ್ಲಿ ಗಣಿಗಾರಿಕೆಗೆ ಕಟ್ಟಡ ನಿರ್ಮಾಣಕ್ಕೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆ ಇಲ್ಲ . ಆದರೆ ಸಮಸ್ಯೆ ಇರುವುದು ಕಸ್ತೂರಿ ರಂಗನ್ ಗುರುತಿಸಿರುವ ನೈಸರ್ಗಿಕ ಭೂ ಪ್ರದೇಶದಲ್ಲಿ 
ಅರಣ್ಯ ಪ್ರದೇಶ ಹೆಚ್ಚಿರುವ ಮತ್ತು ಜನಸಂಖ್ಯೆ ಕಡಿಮೆ ಇರುವ ಶೇಕಡಾ 37% ಭಾಗವನ್ನು ನೈಸರ್ಗಿಕ ಭೂ ಪ್ರದೇಶವೆಂದು ಗುರುತಿಸಲಾಗಿದೆ. ಈ ನೈಸರ್ಗಿಕ ಭೂ ಪ್ರದೇಶಕ್ಕೆ ಹಲವು ನಿಯಮಗಳನ್ನು ರೂಪಿಸಲಾಗಿದೆ ಅವುಗಳಲ್ಲಿ ಮುಖ್ಯವಾಗಿ
1. ಉಷ್ಣ ವಿದ್ಯುತ್ ಸ್ಥಾವರಗಳು ಸಂಪೂರ್ಣ ನಿಷೇಧ.
2. ಹೊಳೆ ಮತ್ತು ಹಳ್ಳಗಳಲ್ಲಿ ಮರಳು ತೆಗಿಯುವುದು ಮತ್ತು ಕಲ್ಲುಗಣಿಗಾರಿಕೆ ಸಂಪೂರ್ಣ ನಿಷೇಧ.
3. ದೊಡ್ಡ ಕಟ್ಟಡಗಳನ್ನು ಕಟ್ಟುವಂತಿಲ್ಲ. ಅಂದರೆ 20000 ಚದರ ಮೀಟರ್ ಗಿಂತ ಹೆಚ್ಚಿನ ವಿಸ್ತೀರ್ಣದ ಮನೆ ಮತ್ತು ಕಟ್ಟಡಗಳನ್ನು ಕಟ್ಟುವಂತಿಲ್ಲ.
4 ಈ ಪ್ರದೇಶದಲ್ಲಿ ಮತ್ತು ಇದರ ಸುತ್ತ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ  ಕಾರ್ಯಗಳನ್ನು ಮಾಡಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ.
5.ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಗೆ ಅನುಮತಿ ಸಿಗಬೇಕು.
6. ಹೆಚ್ಚು ಶಬ್ದ, ವಾಯು ಮಾಲಿನ್ಯ ಮಾಡುವ ಕಾರ್ಖಾನೆಗಳ ನಿಷೇಧ.
7. ಪಶ್ಚಿಮಘಟ್ಟ ಮತ್ತು ಮಲೆನಾಡಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಅದರ ಪರಿಣಾಮವನ್ನು ಪರಿಶೀಲಿಸಿ ಅನುಮತಿ ನೀಡಬೇಕು.
8.  ಪ್ರವಾಸೋದ್ಯಮದಿಂದ ಪರಿಸರ ಮೇಲಾಗುವ ಪರಿಣಾಮಗಳನ್ನು ತಡೆಯಲು ಈಗ ಇರುವ ಕಾನೂನುಗಳನ್ನು ಇನ್ನೂ ಕೂಡ ಬಿಗಿ ಗೊಳಿಸಬೇಕು.
9. ಪರಿಸರ ಸಂರಕ್ಷಣೆಗೆ , ಜಲಾನಯನ ಪ್ರದೇಶಗಳಿಗೆ ಮತ್ತು ಕಾಡು ಪ್ರಾಣಿಗಳ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡಬೇಕು.
10. ಈ ವರದಿಯಲ್ಲಿ ಕರ್ನಾಟಕದ 20668 ಚದರ ಕಿಲೋಮೀಟರ್ ಸೂಕ್ಷ್ಮ ಪ್ರದೇಶ (ನೈಸರ್ಗಿಕ ಭೂ ಪ್ರದೇಶ) ಎಂದು ಗುರುತಿಸಬೇಕೆಂದು ವರದಿಯಲ್ಲಿ ಮಂಡಿಸಲಾಗಿತ್ತು. ಕೇಂದ್ರ ಸರ್ಕಾರವೂ ಕೂಡ ಈ ಪ್ರದೇಶಕ್ಕೆ ಯಾವುದೇ ಆಕ್ಷೇಪಣೆ ಮಾಡದೆ ಈ ಪ್ರದೇಶಕ್ಕೆ ಸಮ್ಮತಿ ಸೂಚಿಸಿತ್ತು.
11.  ಕಳೆದ ಬಾರಿಯ ಕೇರಳದ ಮತ್ತು ಕೊಡಗಿನ ಜಲ ಪ್ರಳಯಕ್ಕೆ ಕಾಡು ಮತ್ತು ಪರಿಸರ ನಾಶವೇ ಮೂಲ ಕಾರಣ ಆದ್ದರಿಂದ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದರು.
12. ಪಶ್ಚಿಮ ಘಟ್ಟ ಮತ್ತು ಮಲೆನಾಡು ಭಾಗದಲ್ಲಿ ಹಲವು ಜೀವ ವೈವಿಧ್ಯಗಳು, ಅಪರೂಪದ ಹೂ ಬಿಡುವ ಗಿಡಗಳು, ಹಲವು ನದಿಗಳ ಉಗಮ ಸ್ಥಾನ, ಹಲವು ಔಷಧೀಯ ಸಸ್ಯಗಳು, ಸಸ್ತನಿಗಳು ಮತ್ತು ಅಪರೂಪದ ಪಕ್ಷಿ ಸಂಕುಲಗಳಿದ್ದು ಇವುಗಳನ್ನು ರಕ್ಷಿಸಲು ಕಸ್ತೂರಿ ರಂಗನ್ ವರದಿ ಜಾರಿಯಗಬೇಕೆಂಬುವುದು ಈ ವರದಿಯಲ್ಲಿ ಉಲ್ಲೇಖವಾಗಿದೆ.
13. ಜಾಗತಿಕ ವಾತಾವರಣ ಕಾಪಾಡಲು ಮತ್ತು ಪರಿಸರ ಸಂತೋಲನಕ್ಕೆ ಅರಣ್ಯ ಮುಖ್ಯವಾಗಿದೆ. ಪ್ರಸ್ತುತ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಪರಿಸರ ಉಳಿಸಿಕೊಳ್ಳಲು ಈ ಯೋಜನೆ ಅನುಷ್ಠಾನಕ್ಕೆ ಬರಬೇಕೆಂಬುವುದು ಕಸ್ತೂರಿ ರಂಗನ್ ಯೋಜನೆಯ ವರದಿಯಾಗಿದೆ.
ಆದರೆ ಈ ವರದಿಯು ಸಮಂಜಸವಾಗಿಲ್ಲ ಮತ್ತು ಈ ವರದಿ ಕೇವಲ ಪಶ್ಚಿಮಘಟ್ಟ ಮತ್ತು ಮಲೆನಾಡಿಗೆ ಮಾತ್ರ ಅನ್ವಯವಾಗುತ್ತದೆ. ಬೇರೆ ಎಲ್ಲೂ ಈ ಯೋಜನೆ ಯಾಕಿಲ್ಲ ಎಂಬುವುದು ಪಶ್ಚಿಮಘಟ್ಟ ಮತ್ತು ಮಲೆನಾಡಿಗರ ವಾದವಾಗಿದೆ. ಕಸ್ತೂರಿ ರಂಗನ್ ವರದಿಗೆ ಹಲವು ರೀತಿಯಲ್ಲಿ ವಿರೋಧವಿದೆ ಅವುಗಳಲ್ಲಿ ಮುಖ್ಯವಾಗಿ ನೋಡುವುದಾದರೆ.
1.  ಪಟ್ಟಣಗಳಲ್ಲಿ ಮನೆಗೊಂಡರಂತೆ ಬೋರ್ವೆಲ್ ಇದೆ, ಈ ರೀತಿ ಬೋರ್ವೆಲ್ ಗಳಿಂದ ಅಂತರ್ಜಲ ಆಗುತ್ತಿರುವ ಹೊಡೆತಗಳಿಗೆ ಕಠಿಣ ಕ್ರಮ ಬೇಕು. ಪಶ್ಚಿಮಘಟ್ಟ ಮತ್ತು ಮಲೆನಾಡಿನಲ್ಲಿ ಬೋರ್ವೆಲ್ ಸಂಖ್ಯೆ ಕಡಿಮೆ ಇಂದರಿಂದ ಅಂತರ್ಜಲಕ್ಕೆ ಯಾವುದೇ ತೊಂದರೆ ಇಲ್ಲ.
2. ಅವೈಜ್ಞಾನಿಕವಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆ ನೈಸರ್ಗಿಕವಾಗಿದ್ದ ಕಾಡುಗಳನ್ನು ನಶಿಸುವಂತೆ ಮಾಡಿ ಅಕೇಶಿಯಾ ಕಾಡುಗಳನ್ನು ಬೆಳೆಸಿ,  ಕಾಡನ್ನು ಮತ್ತು ಅಂತರ್ಜಲ ಮಟ್ಟವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿ ಈಗ ನಮ್ಮ ಮೇಲೆ ವರದಿ ಜಾರಿ ಮಾಡಿ ನಮ್ಮನ್ನು ನೆಮ್ಮದಿಯಾಗಿ ಇರದಂತೆ ಮಾಡುವುದು ಎಷ್ಟು ಸರಿ ಎಂಬುವುದು ಆ ಭಾಗದವರ ವಾದವಾಗಿದೆ.
3. ಹಳ್ಳಿ ರಸ್ತೆಗಳ ಅಭಿವೃದ್ಧಿಗೆ ನಿರ್ಬಂಧ ಮಾಡ್ತಿರಾ. ಆದರೆ ನಗರ ಪ್ರದೇಶದಲ್ಲಿ ರಸ್ತೆಗೋಸ್ಕರ ಸಾವಿರಾರು ಮರಗಳನ್ನು ಕಡಿದರೂ ಕೂಡ ಅದರ ಮೇಲೆಕೆ ನಿರ್ಬಂಧ ಇಲ್ಲ?
4. ವರದಿ ತಯಾರಾಗಿದ್ದು ಉಪಗ್ರಹದ ಆಧಾರದ ಮೇಲೆ ಆದರೆ ವಾಸ್ತವತೆ ಗೊತ್ತಿರುವವರು ಸ್ಥಳೀಯ ಪರಿಸರದ ಬಗ್ಗೆ ಆವಿರುವವರು ವರದಿ ತಯಾರಿಸಿದ್ದರೆ ಸೂಕ್ಷ್ಮ ಪ್ರದೇಶವನ್ನು ಗುರುತಿಸುವಲ್ಲಿ ವಿಫಲರಾಗುತ್ತಿರಲ್ಲಿಲ್ಲ.
5. ಹಳ್ಳಿಗಳ್ಳಲಿ ಯೋಜನೆ ಜಾರಿಯಿಂದ ಮನೆ ಮತ್ತು ಕೊಟ್ಟಿಗೆ ಕಟ್ಟಿಕೊಳ್ಳಲು ಒಂದು ಬುಟ್ಟಿ ಮರಳು ಜಲ್ಲಿಗೂ ಅನುಮತಿ ಪಡೆಯಬೇಕಾಗುತ್ತದೆ. ಅದರ ಈಗ ಅಕ್ರಮಬಾಗಿ ನಡೆಯುತ್ತಿರುವ ಮರಳು ದಂದೆ ಮತ್ತು ಅಕ್ರಮ ಗಣಿಗಾರಿಕೆಗೆ ನಿರ್ಬಂಧ ವಿದಿಸಲಿ. ಇದರ ಉಪಯೋಗ ಪಡೆಯುತ್ತಿರುವುದು ಅಲ್ಲಿನ ಸ್ಥಳೀಯರಲ್ಲ ಅದರ ಬದಲಾಗಿ ನಗರಗಳ್ಳಲ್ಲಿ ಮನೆ, ಕಟ್ಟದ ಕಟ್ಟುವವರಿಗೆ ಉಪಯೋಗವಾಗುತ್ತಿದೆ ಅಷ್ಟೇ.
6. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಹಕ್ಕು ಪತ್ರ ಮತ್ತು ಪಹಣಿ ಇಲ್ಲದ ಜಮೀನನ್ನು ಸರ್ಕಾರ ವಶಪಡಿಸಿಕೊಂಡರೆ ಮುಂದೇನು ಅನ್ನುವುದು ಕೂಡ ದೊಡ್ಡ ಪ್ರಶ್ನೆಯಾಗಿದೆ.
7. ವರದಿ ಜಾರಿಯಾದರೆ ರಾಸಾಯನಿಕ ಗೊಬ್ಬರ ಕಲೆನಾಶಕ ಇದನ್ನೆಲ್ಲ ಬಳಸಬಾರದು ಎಂದಾದರೆ ಗದ್ದೆ ತೋಟಕ್ಕೆ ಅಡಿಕೆ, ಕಾಫಿ, ಇದೆಲ್ಲದಕ್ಕೂ ರೋಗ ಬಂದಾಗ ಕೆಲವು ರಾಸಾಯನಿಕ ಔಷಧಿ ಬಳಸುವುದು ಅನಿವಾರ್ಯ ಆದರೆ ಇದಕ್ಕೆ ಕಡಿವಾಣ ಬಿದ್ದರೆ ಮುಂದೇನು ಮದ್ದಬೇಕು ಎನ್ನುವುದು ರೈತರ ಪ್ರಶ್ನೆ.
8. ವರದಿ ಜಾರಿಯಾದರೆ ಈಗಿರುವ ಎಷ್ಟೋ ಹಳ್ಳಿ ರಸ್ತೆಗೆ ಜಲ್ಲಿ ಡಾಂಬರು ಭಾಗ್ಯ ದೊರೆಯುವುದಿಲ್ಲ. ಹಾಗಾದಾಗ ಆರೋಗ್ಯ ಸಮಸ್ಯೆ ಅಥವಾ ಇನ್ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪಟ್ಟಣಕ್ಕೆ ಹೋಗುವುದು ಹೇಗೆ? ಯಾವ ವಾಹನ ಸಿಗುತ್ತದೆ ಎಂದು ಸರ್ಕಾರವೇ ಹೇಳಬೇಕು.
9. ದೇಶದಲ್ಲಿ ಹಲವು ಕಡೆಗಳಲ್ಲಿ ಸದಿದ್ದಲದೆ ಅರಣ್ಯ ನಾಶ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಕಾಡು ಕ್ರಮೇಣ ಕ್ಷೀಣಿಸಿ ಅದು ನಗರವಾಗಿ ಬದಲಾಗುತ್ತಿದೆ ನಗರದಲ್ಲಿರುವ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ ಇದಾನ್ಯರು ಪ್ರಶ್ನಿಸದೆ ಇದೆಲ್ಲದರ ಸಮತೋಲನಕ್ಕೆ ಪಶ್ಚಿಮಘಟ್ಟಗಳವನ್ನು ಕಾಡು ಕೊಂಪೆಯಂತೆ ಮಾಡಿ ಅಲ್ಲಿರುವವರಿಗೆ ಈ ರೀತಿ ಶಿಕ್ಷೆ ಕೊಡುವುದು ಎಷ್ಟು ಸರಿ.
10. ವರದಿ ಜಾತಿಯಾದರೆ ಹಲವು ಜನರ ಪಶ್ಚಿಮಘಟ್ಟ ಸಂರಕ್ಷಣೆ ಹೆಸರಿನಲ್ಲಿ ಹಣಮಾಡುವುದುಕ್ಕೂ ಕೂಡ ಈ ವರದಿ ಅನುಷ್ಠಾನಕ್ಕೆ ಹಲವು ಪ್ರಯತ್ನಿಸುತ್ತಿದ್ದಾರೆ ಎಂಬುವುದು ಪಶ್ಚಿಮಘಟ್ಟ ಮತ್ತು ಮಲೆನಾಡಿಗರ ಆರೋಪವಾಗಿದೆ.
11. ಅಕೇಶಿಯಾ ನಿಲಗಿರಿಯಂತಹ ಅಂತರ್ಜಲ ಹೀರುವಂತಹ ಕಾಡು ಬೆಳೆಸುವ ಬದಲು ನೈಸರ್ಗಿಕ ಕಾಡು ಬೆಳೆಸಲಿ, ಕೆರೆಗಳ ಅಭಿವೃದ್ಧಿ ಮಾಡಲಿ, ಕಾಡುಗಳಲ್ಲಿ ಇಂಗು ಗುಂಡಿ ಮಾಡಲಿ, ಕಾಡುಗಲ್ಲಿ ನೀರು ಶೇಕರಣೆವಾಗುವಂತಹ ಯೋಜನೆಗನ್ನು ರೂಪಿಸಲಿ ಅದನ್ನು ಬಿಟ್ಟು ಅಕೇಶಿಯಾ ನೀಲಗಿರಿ ಇಂದ ಅರಣ್ಯ ಇಲಾಖೆ ಮತ್ತು ಸರ್ಕಾರಕ್ಕೆ ಹಣ ಸಿಗುತ್ತದೆ ಹೊರತು ಕಾಡು ಉಳಿಯುವುದಿಲ್ಲ.
12. ಅಕ್ರಮ ಗಣಿಗಾರಿಕೆ , ಅಕ್ರಮ ಮರಳು ದಂದೆ, ಅಕ್ರಮವಾಗಿ ದೊಡ್ಡ ಮಟ್ಟದಲ್ಲಿ ಕಾಡುಗಳನ್ನು ಒತ್ತುವರಿ  ಮಾಡಿ ಕಟ್ಟಡ,ರೆಸಾರ್ಟ್ ಗಳನ್ನು ,10-20 ಎಕರೆ ತೋಟಮಾಡುವವರಿಗೆಲ್ಲಾ ಸರಿಯಾದ ಕಾನೂನು ಬರಲಿ ಎಂಬುವುದೇ ಪಶ್ಚಿಮಘಟ್ಟ ಮತ್ತು ಮಲೆನಾಡಿಗರ ಮನದಾಳದ ಮಾತಾಗಿದೆ.
ಕೊನೆಯದಾಗಿ ಹೇಳುವುದಾದರೆ ನಮ್ಮ ಅಜ್ಜ ಮುತ್ತಜ್ಜ ಹೀಗೆ ಹಲವು ತಲೆ ತಲಾಂತರಗಳಿಂದ ಬೆಳೆಸಿ, ಉಳಿಸಿಕೊಂಡು ಬಂದಿರುವ ಪರಿಸರ ಮತ್ತು ಅರಣ್ಯವನ್ನು ಮುಂದೆ ಕೂಡ ಸೂಕ್ತ ರೀತಿಯಲ್ಲಿ ಬೆಳಿಸಿಕೊಂಡು ಮತ್ತು ಉಳಿಸಿಕೊಂಡು ಹೋಗುವುದು ನಮಗೆ ಗೊತ್ತು ಅದನ್ನು ಕಸ್ತೂರಿ ರಂಗನ್ ವರದಿಯಿಂದಾಗಲಿ ಅಥವಾ ಬೇರೆ ಯಾವುದೇ ವರದಿಯಿಂದ ಸಂರಕ್ಷಣೆಯ ಪಾಠ ನಮಗೆ ಬೇಕಿಲ್ಲ ಎನ್ನುವುದು ಪಶ್ಚಿಮಘಟ್ಟದವರ ಮತ್ತು ಮಲೆನಾಡಿಗರ ಅಭಿಪ್ರಾಯವಾಗಿದೆ.

50 ವರ್ಷಕ್ಕೂ ಅಧಿಕ ಇತಿಹಾಸವಿರುವ ಕೋಟೆಮಕ್ಕಿ ಶಾಲೆಯಲ್ಲಿ ಶಿಕ್ಷಕರ ಕೊರತೆ!!!!


ಇತ್ತೀಚ್ಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೆ ಹೆಚ್ಚು. ಆದರೂ ಮಲೆನಾಡಿನಾದ್ಯಂತ ಇಂದಿಗೂ ಕೂಡ ಸರ್ಕಾರಿ ಶಾಲೆಗಳು ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ. ಆದರೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಟೆಮಕ್ಕಿ (ಇಡಕಣಿ) ಶಾಲೆಯಲ್ಲಿ ಕಳೆದ 3 ತಿಂಗಳಿಂದ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 
50 ವರ್ಷಕ್ಕೂ ಅಧಿಕ ಇತಿಹಾಸವಿರುವ ಕೋಟೆಮಕ್ಕಿ ಶಾಲೆಯಲ್ಲಿ ಶಿಕ್ಷಕರ ಕೊರತೆಇದ್ದು ಈ ಶಾಲೆಯಲ್ಲಿ ಒಟ್ಟು 16 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಈಗ ಈ ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಶಾಲೆಯಲ್ಲಿ ಇನ್ನೊಬ್ಬರು ಅತಿಥಿ ಶಿಕ್ಷಕರಿದ್ದು ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆ ಯಾವುದೇ ಗೌರವಧನ ನೀಡಿರಲಿಲ್ಲ. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಪೋಷಕರು ಸೇರಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಆ ಅತಿಥಿ ಶಿಕ್ಷಕರಿಗೆ ಗೌರವಧನ ನೀಡಿದ್ದರು  ಇಲಾಖೆ ಯಾವುದೇ ಗೌರವಧನ ಕೂಡ ನೀಡಿರಲಿಲ್ಲ.   
 ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಲ್ಲದೆ ಅವರಿಗೆ ಪೋಷಕರೆ ಸಂಬಳ ನೀದಿರುವುದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೇ ಶಾಲಾ ಕಟ್ಟಡಕೂಡ ಶಿಥಿಲಗೊಂಡಿದ್ದು ಅದೂ ಕೂಡ ಮುಂದಿನ ಮಳೆಗಾಲದಲ್ಲಿ ಏನಾಗುವುದೋ ಎಂಬುವುದು ಪೋಷಕರ ಆತಂಕವಾಗಿದೆ. ಈ ಗ್ರಾಮದಲ್ಲಿ ಯಾವುದೇ ಖಾಸಗಿ ಶಾಲೆ ಕೂಡ ಇಲ್ಲ ಹೀಗಿದ್ದಾಗ ಮಕ್ಕಳ ಭವಿಷ್ಯ ಮುಂದೇನು ಎಂಬುವುದು ಪೋಷಕರ ಆತಂಕವಾಗಿದೆ. ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಕೆಲವು ವರ್ಷಗಳ ಹಿಂದೆ ಹೆಮ್ಮಕ್ಕಿ ಸರ್ಕಾರಿ ಶಾಲೆ ಕೂಡ ಮುಚ್ಚಲಾಗಿದೆ ಹೀಗೆ ಮುಂದುವರಿದರೆ ಈ ಶಾಲೆ ಕೂಡ ಮುಚ್ಚುವ ದಿನ ದೂರವಿಲ್ಲ. ಆ ಹಂತಕ್ಕೆ ಹೋಗುವುದಕ್ಕಿಂತ ಮುಂಚೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Saturday, January 11, 2020

ಪ್ರಬೋದಿನಿ ವಿದ್ಯಾಕೇಂದ್ರಕ್ಕೆ 25 ರ ಸಂಭ್ರಮ



ಕಳಸದ ಪ್ರಬೋಧಿನಿ ವಿದ್ಯಾಕೇಂದ್ರದ  
ರಜತ ಮಹೋತ್ಸವದ ಅಂಗವಾಗಿ‌ ಇಂದು ಕಳಸದ ಮುಖ್ಯ ರಸ್ತೆಯಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಪ್ರಭಾಕರ್ ಭಟ್, ಜಿ. ಭೀಮೇಶ್ವರ ಜೋಷಿ ಸಹಿತ ಹಲವು ಗಣ್ಯರು ಭಾಗಿಯಾಗಿದ್ದರು.ಇಂದು ಸಂಜೆ ಸಂಜೆ 4.30 ಕ್ಕೆ ಪ್ರಭೋಧಿನಿ ವಿದ್ಯಾ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Friday, January 10, 2020

ಶೃಂಗೇರಿ ಬಂದ್ ಗೆ ಬೆದರಿದ ಕನ್ನಡ ಸಾಹಿತ್ಯ ಪರಿಷತ್! ನಾಳಿನ ಕಾರ್ಯಕ್ರಮ ರದ್ದು.


ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಹೋರಾಟ ಸಮಿತಿ ಮತ್ತು ನಕ್ಸಲ್ ವಿರೋಧ ಹೋರಾಟ ಸಮಿತಿಯ ಪ್ರತಿಭಟನೆಗೆ ಬೆದರಿದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಪರಿಷತ್ ಶೃಂಗೇರಿಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಾಳೆಯ  ಕಾರ್ಯಕ್ರಮವನ್ನು ರದ್ದು ಗೊಳಿಸಿದೆ.
ಈ ವಿಚಾರವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕುಂದೂರ್ ಅಶೋಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://youtu.be/iU35LH7gUw0

Tuesday, January 7, 2020

ನಿರ್ಭಯಾ ಅತ್ಯಾಚಾರಿಗಳಿಗೆ ಜನವರಿ 22 ಕ್ಕೆ ನೇಣುಗಂಭ ಫಿಕ್ಸ್...

ಸತತ 7 ವರ್ಷಗಳ ಕಾನೂನು ಹೋರಾಟದ ಬಳಿಕ ನಿರ್ಭಯಾ ಹತ್ಯೆಯ ಆರೋಪಿಗಳಿಗೆ ಗಲ್ಲು ಶಿಕ್ಷೆಯ ದಿನಾಂಕ ಪ್ರಕಟವಾಗಿದೆ.
2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಪೂರ್ಣ ಪ್ರಮಾಣದ ತೀರ್ಪು ಇಂದು ಹೊರಬಿದ್ದಿದ್ದು  ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ  ದೆಹಲಿಯ ಪಟಿಯಾಲ ಹೌಸ್‌ ಕೋರ್ಟ್‌ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲುಶಿಕ್ಷೆ  ವಿಧಿಸಿ ತೀರ್ಪು ನೀಡಿದೆ. ನ್ಯಾ. ಸತೀಶ್‌ ಕುಮಾರ್‌ ಅರೋರಾ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಪರಾಧಿಗಳ ಪರ ವಕೀಲ ಎ.ಪಿ. ಸಿಂಗ್‌, ಒಂದೆರಡು ದಿನಗಳಲ್ಲಿ ಕ್ಯುರೇಟಿವ್‌ ಅರ್ಜಿ ದಾಖಲಿಸುವುದಾಗಿ ಹೇಳಿಕೊಂಡಿದ್ದಾರೆ.
ಸದ್ಯ ನ್ಯಾಯಾಲಯದ ಆದೇಶಕ್ಕೆ ಸಂತಸ ವ್ಯಕ್ತಪಡಿಸಿರುವ ನಿರ್ಭಯಾ ಪಾಲಕರು, ಈ ತೀರ್ಪಿನಿಂದಾಗಿ ನನ್ನ ಮಗಳಿಗೆ ಇಂದು ನ್ಯಾಯ ಸಿಕ್ಕಿದೆ. ಇದು ನನ್ನ ಮಗಳಿಗೆ ಮಾತ್ರವಲ್ಲ ದೇಶದ ಪ್ರತಿಯೊಬ್ಬ ಮಹಿಳೆಯರಿಗೂ ಇಂದು ನ್ಯಾಯ ಸಿಕ್ಕಿದಂತಾಗಿದೆ. ಪ್ರಕರಣದ ನಾಲ್ವರು ಅಪರಾಧಿಗಳಿಗೆ ನೀಡಿದ ಡೆತ್ ವಾರೆಂಟ್ ನಿಂದ ಜನಕ್ಕೆ ನ್ಯಾಯಾಂಗದ ವ್ಯವಸ್ಥೆಯ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ನಿರ್ಭಯಾ ತಾಯಿ ಆಶಾದೇವಿ ಕಣ್ಣೀರಿಟ್ಟರು.
ಏನೇ ಆದರೂ ಒಂದು ತೀರ್ಪು ಬರಲು 7 ವರ್ಷ ಕಾಯಬೇಕು ಎಂದರೆ ಹೇಗೆ? ಮುಂದಿನ ದಿನಗಳಲ್ಲಿ ಭಾರತದ ಕಾನೂನು ವ್ಯವತ್ತೆ ಮತ್ತಷ್ಟು ಚುರುಕಾಗಬೇಕು ಎಂಬುವುದೇ ನಮ್ಮ ಆಶಯ.

ನಾಳೆ ಭಾರತ್ ಬಂದ್!!! ಬೇಡಿಕೆ ಏನು?

 ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ 10 ಕಾರ್ಮಿಕ ಸಂಘಟನೆಗಲು ನಾಳೆ ದೇಶವ್ಯಾಪಿ ಬಂದ್ ಗೆ ಕರೆ ನೀಡಿದ್ದು ಬೆಂಗಳೂರಿನ ಕೆಲ ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ ಸಿಐಟಿಯೂ ಸೇರಿ ವಿವಿಧ ಸಂಘಟನೆಗಳು ಭಾರತ್ ಬಂದ್ ಗೆ ಬೆಂಬಲ ಸೂಚಿಸಿದ್ದು ಇದರಿಂದ ನಾಳೆ ಬೆಳಗ್ಗೆ 6ರಿಂದ ಸಂಜೆ 6ರ ತನಕ ನಗರದ ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟಲಿದ್ದು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.
 ಈ ಪ್ರತಿಭಟನೆಗೆ ಕಾರಣ ಏನು ಎಂಬುವುದನ್ನು ತಿಳಿಯುದಾದರೆ...
1. ಒಟ್ಟು ರಾಷ್ಟ್ರೀಯ ಉತ್ಪನ್ನ ಜಿಡಿಪಿ ಶೇ.9.4 ರಿಂದ 4.5ಕ್ಕೆ ಕುಸಿತ.
2. ಆರ್ಥಿಕ ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಂಡವರ ಸಂಖ್ಯೆ 50 ಲಕ್ಷ ಮಂದಿ.
3. ಎಂಜಿನಿಯರಿಂಗ್ ಮುಗಿಸಿದ 100 ಮಂದಿಯಲ್ಲಿ 12 ಜನರಿಗೆ ಮಾತ್ರ ಉದ್ಯೋಗ.
4. ಮಾಲೀಕರ ಲಾಭದ ಪಾಲು 100ರಲ್ಲಿ 45 ರೂ. ಕಾರ್ಮಿಕರ ವೇತದ ಪಾಲು 100 ರಲ್ಲಿ 15 ರೂ.
5. ಜಿಎಸ್‍ಟಿಯಿಂದ ಎಲ್ಲ ಬೆಲೆಗಳು ಶೇ.20 ರಷ್ಟು ಏರಿಕೆ.
6. ಕಾರ್ಮಿಕರು ಪ್ರತಿಭಟನೆ ಮಾಡಿದರೆ 6 ತಿಂಗಳು ಜೈಲು ಶಿಕ್ಷೆ.
7. ಶ್ರೀಮಂತ ಉದ್ಯಮಿಗಳು ಮಾಡಿರುವ ಬ್ಯಾಂಕ್ ಸಾಲ ಮರುಪಾವತಿ ಮಾಡದೇ ಇರಲು ಕಾನೂನು ತರಲಾಗಿದೆ.

ಬೇಡಿಕೆ ಏನು?
1. 21 ಸಾವಿರ ರೂಪಾಯಿ ರಾಷ್ಟ್ರವ್ಯಾಪಿ ಸಮಾನ ಕನಿಷ್ಟ ವೇತನಕ್ಕೆ ಆಗ್ರಹ.
2. ಕೇಂದ್ರ ಸರ್ಕಾರ ದ ಖಾಸಗೀಕರಣ ನೀತಿಗೆ ವಿರೋಧ.
3. ಕಾರ್ಮಿಕ ಕಾನೂನು ಕಟ್ಟುನಿಟ್ಟಿನ ಜಾರಿಗಾಗಿ ಜಿಲ್ಲೆಗಳಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆ.
4. ಮಾಸಿಕ ಪಿಂಚಣಿ 10 ಸಾವಿರ ರೂಪಾಯಿಗಾಗಿ ಬೇಡಿಕೆ.
5. ಬೆಲೆಯೇರಿಕೆ ನಿಯಂತ್ರಣಕ್ಕೆ ಆಗ್ರಹಿಸಿ, ಸಾರ್ವತ್ರಿಕಪಡಿತರ ವ್ಯವಸ್ಥೆಗಾಗಿ.
6. ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ನೀತಿಗಳ ವಿರುದ್ಧ ಉದ್ಯೋಗ ಕಳಕೊಂಡ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು.
7. ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಬೀದಿಬದಿಯ ವ್ಯಾಪಾರಸ್ಥರು, ಮನೆ ಕೆಲಸಗಾರರು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಸ್ಥಾಪನೆ, ಕಲ್ಯಾಣ ಯೋಜನೆಗೆ ಅನುದಾನ ನೀಡಬೇಕು.
8. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಳಿಗಾಗಿ ಡಾ| ಸ್ವಾಮಿನಾಥನ್ ವರದಿ ಜಾರಿಗಾಗಿ, ಸಾಲ ಮನ್ನಾಕ್ಕಾಗಿ, ರೈತರ ಆತ್ಮಹತ್ಯೆ ತಡೆಗಾಗಿ, ಗ್ರಾಮೀಣ ಉದ್ಯೋಗ ಖಾತ್ರಿ ಬಲಪಡಿಸಲು ಆಗ್ರಹ.
9. ಗುತ್ತಿಗೆ ಪದ್ಧತಿ ನಿಯಂತ್ರಣ, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಖಾಯಂ ಖಾತ್ರಿಗೆ ಆಗ್ರಹ.
11. ರಕ್ಷಣಾ ವಲಯ, ರೈಲ್ವೇ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮಾಡಬಾರದು
ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ ನಾಳೆ ಭಾರತ್ ಬಂದ್ ಆಗಲಿದ್ದು ಎಷ್ಟರ ಮಟ್ಟಿಗೆ ಯಶಸ್ವಿ ಆಗಲಿದೆ ಎಂಬುವುದು ಕಾದು ನೋಡಬೇಕಾಗಿದೆ.

Saturday, January 4, 2020

ಕೋಲಾರದಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ಪ್ರತಿಭಟನೆ.....ಲಘು ಲಾಠಿ ಪ್ರಹಾರ.


ಪೌರತ್ವ ಕಾಯ್ದೆ ಪರವಾಗಿ ನಡೆದ ಹೋರಾಟದಲ್ಲಿ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್ ಮೀರಿ ಹೋಗಲು ಪ್ರಯತ್ನಿಸಿದಾಗ ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಇಂದು ಕೋಲಾರದಲ್ಲಿ ನಡೆದಿದೆ. ಜನಜಾಗೃತಿ ರ‍್ಯಾಲಿ ಟವರ್ ಕ್ಲಾಕ್ ಸರ್ಕಲ್ ಕಡೆ ಹೋಗದಂತೆ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಅದನ್ನೂ ಮೀರಿ ಕಾರ್ಯಕರ್ತರು ಟವರ್ ಕ್ಲಾಕ್ ದಾಟಿ ಹೋಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆಯಲು ಹೋದಾಗ ಪೊಲೀಸರ ಮಾತು ಕೇಳದೆ ಮುನ್ನುಗ್ಗಿದಾಗ ಅವರನ್ನು ಹಿಮ್ಮೆಟ್ಟಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಲಾಠಿ ಪ್ರಹರದಿಂದ ರೊಚ್ಚಿಗ್ಗೆದ್ದ ಬಿಜೆಪಿ ಕಾರ್ಯಕರ್ತರು ಪೊಲೀಸರ ಈ ನಡೆಗೆ ಆಕ್ರೋಶಗೊಂಡು ಲಾಠಿಚಾರ್ಜ್ ಮಾಡಿದ ಪೊಲೀಸರ ಅಮಾನತಿಗೆ ಆಗ್ರಹಿಸಿದ ನೂರಾರು ಕಾರ್ಯಕರ್ತರು ಧರಣಿ ನಡೆಸಿದರು. ಬಿಜೆಪಿ ಸಂಸದ ಎಸ್. ಮುನಿಸ್ವಾಮಿ, ವೈ.ಎ. ನಾರಾಯಣಸ್ವಾಮಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

Friday, January 3, 2020

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ವಿಚಾರಕ್ಕೆ ತೀವ್ರ ವಿರೋಧ.


  • ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ ಇಂದು ಶೃಂಗೇರಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯ ದೃಶ್ಯ.
  • ನಕ್ಸಲ್ ವಿರೋಧಿ ಹೋರಾಟ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ವೇದಿಕೆಯಿಂದ ಶೃಂಗೇರಿಯಲ್ಲಿ ಬೃಹತ್ ಪ್ರತಿಭಟನೆ.
  • ಕಲ್ಕುಳಿ ವಿಠ್ಠಲ್ ಹೆಗ್ಡೆ ಆಯ್ಕೆ ವಿರೋಧಿಸಿ ಬೃಹತ್ ಪ್ರತಿಭಟನೆಯಲ್ಲಿ ನೂರಾರು ಜನ ಭಾಗಿ.