ಹುಲುಗಾರಗದ್ದೆ ಕಾಲು ಸೇತುವೆಗೆ ಬೇಕಿದೆ ಮುಕ್ತಿ.....ಶಾಸಕರೆ ಇತ್ತ ಗಮನ ಹರಿಸಿ.

ಹೊರನಾಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುಲುಗಾರಗದ್ದೆ ಬಳಿ ಇರುವ ಕಾಲುಸೇತುವೆ ತೀರಾ ದುಃಸ್ಥಿತಿಯಲ್ಲಿದೆ. ಕಳೆದ ಮಳೆಗಾಲದಲ್ಲಿ ಸುರಿದ ಭೀಕರ ಮಳೆಗೆ ಸೇತುವೆಯ ಮೇಲೆ ನೀರು ಹರಿದು ಸೇತುವೆ ಶಿಥಿಲಗೊಂಡಿದ್ದು, ಸೇತುವೆ ಅಪಾಯದ ಸ್ಥಿತಿಯಲ್ಲಿ ಇದೆ. ಈ ಸೇತುವೆಯಲ್ಲೇ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಇದೆ ಹಾಗೂ ಸಾರ್ವಜನಿಕರು ಕೂಡ ಈ ಸೇತುವೆಯಲ್ಲೇ ಓಡಾಡುವ ಪರಿಸ್ಥಿತಿ ಇದೆ. ಪಟ್ಟಣಕ್ಕೆ ಹೋಗಲು ಈ ಸೇತುವೆ ಬಿಟ್ಟು ಬೇರೆ ಯಾವುದೇ ದಾರಿ ಕೂಡ ಇಲ್ಲವಾಗಿದ್ದು ಮುಂದಿನ ಮಳೆಗಾಲದಲ್ಲಿ ಹೇಗೆ ಸಂಚರಿಸುವುದು ಎಂಬ ಚಿಂತೆಯಲ್ಲಿ ಸಾರ್ವಜನಿಕರು ಮುಳುಗಿದ್ದಾರೆ. ಆದ್ದರಿಂದ ಮಾನ್ಯ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಕ್ಷೇತ್ರದ ಶಾಸಕರದ ಎಮ್. ಪಿ.ಕುಮಾರಸ್ವಾಮಿ ಅವರು ಈ ಬಗ್ಗೆ ಗಮನಹರಿಸಿ ಶೀಘ್ರವಾಗಿ ಇದಕ್ಕೊಂದು ಪರಿಹಾರ ಒದಗಿಸಬೇಕೆಂದು ಸ್ಥಳೀಯರಾದ ದಿನೇಶ್ ಅವರು ಆಗ್ರಹಿಸಿದ್ದಾರೆ.


0 Comments:
Post a Comment
Subscribe to Post Comments [Atom]
<< Home