ಮಲೆನಾಡಿಗರ ನಿದ್ದೆಗೆಡಿಸುತ್ತಿರುವ ಕಸ್ತೂರಿ ರಂಗನ್ ವರದಿ!!!
"ನಮ್ಮ ಪೂರ್ವಜರು ಉಳಿಸಿ, ಬೆಳೆಸಿಕೊಂಡು ಬಂದಿರುವ ಅರಣ್ಯವನ್ನು ರಕ್ಷಿಸುವುದು ನಮಗೆ ಗೊತ್ತು, ನಮ್ಮ ಪೂರ್ವಜರ ಕಾಲದಲ್ಲಿ ಇದ್ದ ಕಾಡನ್ನು ನಾವೂ ಇನ್ನೂ ಕೂಡ ಸಂರಕ್ಷಿಸಿಕೊಂಡು ಬಂದಿದ್ದೇವೆ ಮುಂದೆ ಕೂಡ ಹೀಗೆ ಸಂರಕ್ಷಣೆ ಮಾಡಿಕೊಂಡು ಹೋಗುವುದು ನಮಗೆ ಗೊತ್ತು ಇದಕ್ಕೆ ಯಾವ ಯೋಜನೆ ಕೂಡ ನಮಗೆ ಬೇಡ ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡಿ ಅಷ್ಟೇ ಸಾಕು"ಕಸ್ತೂರಿ ರಂಗನ್ ವರದಿ ಎಂದೊಡನೆ ಚಳಿಗಾಲದಲ್ಲೂ ಕೂಡ ಮಲೆನಾಡಿಗರು ಬೆವರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಮತ್ತು ಅಡಿಕೆಗೆ ತಗಲಿರುವ ಕೊಳೆರೋಗ ಇದೆಲ್ಲದರ ನಡುವೆ ಮಲೆನಾಡಿನ ಜನರಿಗೆ ಮತ್ತೊಂದು ಆಘಾತಕಾರಿ ವಿಷಯವೆಂದರೆ ಅದೇ ಈ ಕಸ್ತೂರಿ ರಂಗನ್ ವರದಿ.
ಹಲವಾರು ವರ್ಷಗಳಿಂದಲೂ ಪಶ್ಚಿಮಘಟ್ಟ ಮತ್ತು ಮಲೆನಾಡು ಭಾಗದವರು ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುತ್ತಾ ಬಂದಿದ್ದರೂ ಕೂಡ ಪರಿಸರ ಪ್ರೇಮಿಗಳು ಎಂದು ಕರೆಸಿಕೊಳ್ಳುವವರು ವರದಿ ಜಾರಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ವರದಿ ಜಾರಿಯಾದರೆ ಮೂಲಭೂತ ಸೌಕರ್ಯಗಳ ಕೊರತೆ , ಕೃಷಿ ಚಟುವಟಿಕೆಗಳ ಮೇಲಿನ ನಿರ್ಬಂಧ ಹೀಗೆ ಹಲವು ಕಾರಣಗಳಿಂದಾಗಿ ಮಲೆನಾಡು ಮತ್ತು ಪಶ್ಚಿಮಘಟ್ಟದ ಭಾಗದಲ್ಲಿ ಜೀವನ ನಡೆಸುವುದು ಕೂಡ ಕಷ್ಟವಾಗುತ್ತದೆ ಎಂಬುವುದು ಈ ಭಾಗದವರ ಅಳಲವಾಗಿದೆ. ಅದರೆ ವರದಿ ಜಾರಿಯಾಗದೆ ಇದ್ದರೆ ಕಾಡು ಮತ್ತು ಕಾಡು ಪ್ರಾಣಿಗಳ ಉಳಿವು ಅಸಾಧ್ಯ ಎಂಬುವುದು ಪರಿಸರವಾದಿಗಳ ವಾದವಾಗಿದೆ.
ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲವು ರಾಜಕಾರಣಿಗಳು ಇದನ್ನೇ ತಮ್ಮ ಬಂಡವಾಳ ವಾಗಿಸಿಕೊಂಡು ತಮಗೆ ಅನುಕೂಲವಾಗುವಂತೆ ಇದರ ಬಗ್ಗೆ ಮಾತನಾಡುತ್ತಿದ್ದಾರೆ.
ಹಾಗಾದರೆ ಕಸ್ತೂರಿ ರಂಗನ್ ವರದಿಯಲ್ಲಿ ಅಂತದ್ದೇನಿದೆ ತಿಳಿದುಕೊಳ್ಳೋಣ ಬನ್ನಿ.
ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ 2012 ರ ಆಗಸ್ಟ್ 17 ರಂದು ಕೇಂದ್ರ ಸರ್ಕಾರ ಒಂದು ತಂಡ ರಚನೆಮಾಡಿ ವರದಿ ನೀಡುವಂತೆ ಕಸ್ತೂರಿ ರಂಗನ್ ಅವರಿಗೆ ಸೂಚಿಸಲಾಯಿತು. ಅದರಂತೆ ಅವರ ನೇತೃತ್ವದ ತಂಡ 2013 ಏಪ್ರಿಲ್ 15 ರಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿನ ಹಲವು ಅಂಶಗಳು ಪಶ್ಚಿಮಘಟ್ಟದ ಹಾಗೂ ಮಲೆನಾಡಿನ ಜನರಿಗೆ ಮಾರಕವಾಗಿದೆ ಎಂದು ಈ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಸ್ತೂರಿ ರಂಗನ್ ವರದಿಯ ಪ್ರಮುಖ ಅಂಶಗಳು:
ಈ ವರದಿಯಲ್ಲಿ ಮುಖ್ಯವಾಗಿ ಅರಣ್ಯ ಪ್ರದೇಶ ಹೆಚ್ಚಾಗಿರುವ ಪ್ರದೇಶಗಳನ್ನು ಗುರುತಿಸಲಾಗಿದೆ.
ಈ ವರದಿಯಲ್ಲಿ ಮುಖ್ಯವಾಗಿ 2 ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಸಾಂಸ್ಕೃತಿಕ ಭೂ ಪ್ರದೇಶ ಮತ್ತು ನೈಸರ್ಗಿಕ ಭೂ ಪ್ರದೇಶ
ಸಾಂಸ್ಕೃತಿಕ ಭೂ ಪ್ರದೇಶ ಎಂದರೆ ನಗರ ಪ್ರದೇಶ ಮತ್ತು ಹೆಚ್ಚು ಜನರು ವಾಸಿಸುವ ಪ್ರದೇಶವನ್ನು ಸಾಂಸ್ಕೃತಿಕ ಭೂ ಪ್ರದೇಶ ಎಂದು ಗುರುತಿಸಲಾಗಿದೆ ಈ ಭೂ ಪ್ರದೇಶವು ಕಸ್ತೂರಿ ರಂಗನ್ ವರದಿಯಲ್ಲಿ ಶೇಕಡಾ 63% ಭಾಗವನ್ನು ಗುರುತಿಸಲಾಗಿದೆ. ಇಲ್ಲಿ ಗಣಿಗಾರಿಕೆಗೆ ಕಟ್ಟಡ ನಿರ್ಮಾಣಕ್ಕೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆ ಇಲ್ಲ . ಆದರೆ ಸಮಸ್ಯೆ ಇರುವುದು ಕಸ್ತೂರಿ ರಂಗನ್ ಗುರುತಿಸಿರುವ ನೈಸರ್ಗಿಕ ಭೂ ಪ್ರದೇಶದಲ್ಲಿ
ಅರಣ್ಯ ಪ್ರದೇಶ ಹೆಚ್ಚಿರುವ ಮತ್ತು ಜನಸಂಖ್ಯೆ ಕಡಿಮೆ ಇರುವ ಶೇಕಡಾ 37% ಭಾಗವನ್ನು ನೈಸರ್ಗಿಕ ಭೂ ಪ್ರದೇಶವೆಂದು ಗುರುತಿಸಲಾಗಿದೆ. ಈ ನೈಸರ್ಗಿಕ ಭೂ ಪ್ರದೇಶಕ್ಕೆ ಹಲವು ನಿಯಮಗಳನ್ನು ರೂಪಿಸಲಾಗಿದೆ ಅವುಗಳಲ್ಲಿ ಮುಖ್ಯವಾಗಿ
1. ಉಷ್ಣ ವಿದ್ಯುತ್ ಸ್ಥಾವರಗಳು ಸಂಪೂರ್ಣ ನಿಷೇಧ.
2. ಹೊಳೆ ಮತ್ತು ಹಳ್ಳಗಳಲ್ಲಿ ಮರಳು ತೆಗಿಯುವುದು ಮತ್ತು ಕಲ್ಲುಗಣಿಗಾರಿಕೆ ಸಂಪೂರ್ಣ ನಿಷೇಧ.
3. ದೊಡ್ಡ ಕಟ್ಟಡಗಳನ್ನು ಕಟ್ಟುವಂತಿಲ್ಲ. ಅಂದರೆ 20000 ಚದರ ಮೀಟರ್ ಗಿಂತ ಹೆಚ್ಚಿನ ವಿಸ್ತೀರ್ಣದ ಮನೆ ಮತ್ತು ಕಟ್ಟಡಗಳನ್ನು ಕಟ್ಟುವಂತಿಲ್ಲ.
4 ಈ ಪ್ರದೇಶದಲ್ಲಿ ಮತ್ತು ಇದರ ಸುತ್ತ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ.
5.ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಗೆ ಅನುಮತಿ ಸಿಗಬೇಕು.
6. ಹೆಚ್ಚು ಶಬ್ದ, ವಾಯು ಮಾಲಿನ್ಯ ಮಾಡುವ ಕಾರ್ಖಾನೆಗಳ ನಿಷೇಧ.
7. ಪಶ್ಚಿಮಘಟ್ಟ ಮತ್ತು ಮಲೆನಾಡಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಅದರ ಪರಿಣಾಮವನ್ನು ಪರಿಶೀಲಿಸಿ ಅನುಮತಿ ನೀಡಬೇಕು.
8. ಪ್ರವಾಸೋದ್ಯಮದಿಂದ ಪರಿಸರ ಮೇಲಾಗುವ ಪರಿಣಾಮಗಳನ್ನು ತಡೆಯಲು ಈಗ ಇರುವ ಕಾನೂನುಗಳನ್ನು ಇನ್ನೂ ಕೂಡ ಬಿಗಿ ಗೊಳಿಸಬೇಕು.
9. ಪರಿಸರ ಸಂರಕ್ಷಣೆಗೆ , ಜಲಾನಯನ ಪ್ರದೇಶಗಳಿಗೆ ಮತ್ತು ಕಾಡು ಪ್ರಾಣಿಗಳ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡಬೇಕು.
10. ಈ ವರದಿಯಲ್ಲಿ ಕರ್ನಾಟಕದ 20668 ಚದರ ಕಿಲೋಮೀಟರ್ ಸೂಕ್ಷ್ಮ ಪ್ರದೇಶ (ನೈಸರ್ಗಿಕ ಭೂ ಪ್ರದೇಶ) ಎಂದು ಗುರುತಿಸಬೇಕೆಂದು ವರದಿಯಲ್ಲಿ ಮಂಡಿಸಲಾಗಿತ್ತು. ಕೇಂದ್ರ ಸರ್ಕಾರವೂ ಕೂಡ ಈ ಪ್ರದೇಶಕ್ಕೆ ಯಾವುದೇ ಆಕ್ಷೇಪಣೆ ಮಾಡದೆ ಈ ಪ್ರದೇಶಕ್ಕೆ ಸಮ್ಮತಿ ಸೂಚಿಸಿತ್ತು.
11. ಕಳೆದ ಬಾರಿಯ ಕೇರಳದ ಮತ್ತು ಕೊಡಗಿನ ಜಲ ಪ್ರಳಯಕ್ಕೆ ಕಾಡು ಮತ್ತು ಪರಿಸರ ನಾಶವೇ ಮೂಲ ಕಾರಣ ಆದ್ದರಿಂದ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದರು.
12. ಪಶ್ಚಿಮ ಘಟ್ಟ ಮತ್ತು ಮಲೆನಾಡು ಭಾಗದಲ್ಲಿ ಹಲವು ಜೀವ ವೈವಿಧ್ಯಗಳು, ಅಪರೂಪದ ಹೂ ಬಿಡುವ ಗಿಡಗಳು, ಹಲವು ನದಿಗಳ ಉಗಮ ಸ್ಥಾನ, ಹಲವು ಔಷಧೀಯ ಸಸ್ಯಗಳು, ಸಸ್ತನಿಗಳು ಮತ್ತು ಅಪರೂಪದ ಪಕ್ಷಿ ಸಂಕುಲಗಳಿದ್ದು ಇವುಗಳನ್ನು ರಕ್ಷಿಸಲು ಕಸ್ತೂರಿ ರಂಗನ್ ವರದಿ ಜಾರಿಯಗಬೇಕೆಂಬುವುದು ಈ ವರದಿಯಲ್ಲಿ ಉಲ್ಲೇಖವಾಗಿದೆ.
13. ಜಾಗತಿಕ ವಾತಾವರಣ ಕಾಪಾಡಲು ಮತ್ತು ಪರಿಸರ ಸಂತೋಲನಕ್ಕೆ ಅರಣ್ಯ ಮುಖ್ಯವಾಗಿದೆ. ಪ್ರಸ್ತುತ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಪರಿಸರ ಉಳಿಸಿಕೊಳ್ಳಲು ಈ ಯೋಜನೆ ಅನುಷ್ಠಾನಕ್ಕೆ ಬರಬೇಕೆಂಬುವುದು ಕಸ್ತೂರಿ ರಂಗನ್ ಯೋಜನೆಯ ವರದಿಯಾಗಿದೆ.
ಆದರೆ ಈ ವರದಿಯು ಸಮಂಜಸವಾಗಿಲ್ಲ ಮತ್ತು ಈ ವರದಿ ಕೇವಲ ಪಶ್ಚಿಮಘಟ್ಟ ಮತ್ತು ಮಲೆನಾಡಿಗೆ ಮಾತ್ರ ಅನ್ವಯವಾಗುತ್ತದೆ. ಬೇರೆ ಎಲ್ಲೂ ಈ ಯೋಜನೆ ಯಾಕಿಲ್ಲ ಎಂಬುವುದು ಪಶ್ಚಿಮಘಟ್ಟ ಮತ್ತು ಮಲೆನಾಡಿಗರ ವಾದವಾಗಿದೆ. ಕಸ್ತೂರಿ ರಂಗನ್ ವರದಿಗೆ ಹಲವು ರೀತಿಯಲ್ಲಿ ವಿರೋಧವಿದೆ ಅವುಗಳಲ್ಲಿ ಮುಖ್ಯವಾಗಿ ನೋಡುವುದಾದರೆ.
1. ಪಟ್ಟಣಗಳಲ್ಲಿ ಮನೆಗೊಂಡರಂತೆ ಬೋರ್ವೆಲ್ ಇದೆ, ಈ ರೀತಿ ಬೋರ್ವೆಲ್ ಗಳಿಂದ ಅಂತರ್ಜಲ ಆಗುತ್ತಿರುವ ಹೊಡೆತಗಳಿಗೆ ಕಠಿಣ ಕ್ರಮ ಬೇಕು. ಪಶ್ಚಿಮಘಟ್ಟ ಮತ್ತು ಮಲೆನಾಡಿನಲ್ಲಿ ಬೋರ್ವೆಲ್ ಸಂಖ್ಯೆ ಕಡಿಮೆ ಇಂದರಿಂದ ಅಂತರ್ಜಲಕ್ಕೆ ಯಾವುದೇ ತೊಂದರೆ ಇಲ್ಲ.
2. ಅವೈಜ್ಞಾನಿಕವಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆ ನೈಸರ್ಗಿಕವಾಗಿದ್ದ ಕಾಡುಗಳನ್ನು ನಶಿಸುವಂತೆ ಮಾಡಿ ಅಕೇಶಿಯಾ ಕಾಡುಗಳನ್ನು ಬೆಳೆಸಿ, ಕಾಡನ್ನು ಮತ್ತು ಅಂತರ್ಜಲ ಮಟ್ಟವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿ ಈಗ ನಮ್ಮ ಮೇಲೆ ವರದಿ ಜಾರಿ ಮಾಡಿ ನಮ್ಮನ್ನು ನೆಮ್ಮದಿಯಾಗಿ ಇರದಂತೆ ಮಾಡುವುದು ಎಷ್ಟು ಸರಿ ಎಂಬುವುದು ಆ ಭಾಗದವರ ವಾದವಾಗಿದೆ.
3. ಹಳ್ಳಿ ರಸ್ತೆಗಳ ಅಭಿವೃದ್ಧಿಗೆ ನಿರ್ಬಂಧ ಮಾಡ್ತಿರಾ. ಆದರೆ ನಗರ ಪ್ರದೇಶದಲ್ಲಿ ರಸ್ತೆಗೋಸ್ಕರ ಸಾವಿರಾರು ಮರಗಳನ್ನು ಕಡಿದರೂ ಕೂಡ ಅದರ ಮೇಲೆಕೆ ನಿರ್ಬಂಧ ಇಲ್ಲ?
4. ವರದಿ ತಯಾರಾಗಿದ್ದು ಉಪಗ್ರಹದ ಆಧಾರದ ಮೇಲೆ ಆದರೆ ವಾಸ್ತವತೆ ಗೊತ್ತಿರುವವರು ಸ್ಥಳೀಯ ಪರಿಸರದ ಬಗ್ಗೆ ಆವಿರುವವರು ವರದಿ ತಯಾರಿಸಿದ್ದರೆ ಸೂಕ್ಷ್ಮ ಪ್ರದೇಶವನ್ನು ಗುರುತಿಸುವಲ್ಲಿ ವಿಫಲರಾಗುತ್ತಿರಲ್ಲಿಲ್ಲ.
5. ಹಳ್ಳಿಗಳ್ಳಲಿ ಯೋಜನೆ ಜಾರಿಯಿಂದ ಮನೆ ಮತ್ತು ಕೊಟ್ಟಿಗೆ ಕಟ್ಟಿಕೊಳ್ಳಲು ಒಂದು ಬುಟ್ಟಿ ಮರಳು ಜಲ್ಲಿಗೂ ಅನುಮತಿ ಪಡೆಯಬೇಕಾಗುತ್ತದೆ. ಅದರ ಈಗ ಅಕ್ರಮಬಾಗಿ ನಡೆಯುತ್ತಿರುವ ಮರಳು ದಂದೆ ಮತ್ತು ಅಕ್ರಮ ಗಣಿಗಾರಿಕೆಗೆ ನಿರ್ಬಂಧ ವಿದಿಸಲಿ. ಇದರ ಉಪಯೋಗ ಪಡೆಯುತ್ತಿರುವುದು ಅಲ್ಲಿನ ಸ್ಥಳೀಯರಲ್ಲ ಅದರ ಬದಲಾಗಿ ನಗರಗಳ್ಳಲ್ಲಿ ಮನೆ, ಕಟ್ಟದ ಕಟ್ಟುವವರಿಗೆ ಉಪಯೋಗವಾಗುತ್ತಿದೆ ಅಷ್ಟೇ.
6. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಹಕ್ಕು ಪತ್ರ ಮತ್ತು ಪಹಣಿ ಇಲ್ಲದ ಜಮೀನನ್ನು ಸರ್ಕಾರ ವಶಪಡಿಸಿಕೊಂಡರೆ ಮುಂದೇನು ಅನ್ನುವುದು ಕೂಡ ದೊಡ್ಡ ಪ್ರಶ್ನೆಯಾಗಿದೆ.
7. ವರದಿ ಜಾರಿಯಾದರೆ ರಾಸಾಯನಿಕ ಗೊಬ್ಬರ ಕಲೆನಾಶಕ ಇದನ್ನೆಲ್ಲ ಬಳಸಬಾರದು ಎಂದಾದರೆ ಗದ್ದೆ ತೋಟಕ್ಕೆ ಅಡಿಕೆ, ಕಾಫಿ, ಇದೆಲ್ಲದಕ್ಕೂ ರೋಗ ಬಂದಾಗ ಕೆಲವು ರಾಸಾಯನಿಕ ಔಷಧಿ ಬಳಸುವುದು ಅನಿವಾರ್ಯ ಆದರೆ ಇದಕ್ಕೆ ಕಡಿವಾಣ ಬಿದ್ದರೆ ಮುಂದೇನು ಮದ್ದಬೇಕು ಎನ್ನುವುದು ರೈತರ ಪ್ರಶ್ನೆ.
8. ವರದಿ ಜಾರಿಯಾದರೆ ಈಗಿರುವ ಎಷ್ಟೋ ಹಳ್ಳಿ ರಸ್ತೆಗೆ ಜಲ್ಲಿ ಡಾಂಬರು ಭಾಗ್ಯ ದೊರೆಯುವುದಿಲ್ಲ. ಹಾಗಾದಾಗ ಆರೋಗ್ಯ ಸಮಸ್ಯೆ ಅಥವಾ ಇನ್ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪಟ್ಟಣಕ್ಕೆ ಹೋಗುವುದು ಹೇಗೆ? ಯಾವ ವಾಹನ ಸಿಗುತ್ತದೆ ಎಂದು ಸರ್ಕಾರವೇ ಹೇಳಬೇಕು.
9. ದೇಶದಲ್ಲಿ ಹಲವು ಕಡೆಗಳಲ್ಲಿ ಸದಿದ್ದಲದೆ ಅರಣ್ಯ ನಾಶ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಕಾಡು ಕ್ರಮೇಣ ಕ್ಷೀಣಿಸಿ ಅದು ನಗರವಾಗಿ ಬದಲಾಗುತ್ತಿದೆ ನಗರದಲ್ಲಿರುವ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ ಇದಾನ್ಯರು ಪ್ರಶ್ನಿಸದೆ ಇದೆಲ್ಲದರ ಸಮತೋಲನಕ್ಕೆ ಪಶ್ಚಿಮಘಟ್ಟಗಳವನ್ನು ಕಾಡು ಕೊಂಪೆಯಂತೆ ಮಾಡಿ ಅಲ್ಲಿರುವವರಿಗೆ ಈ ರೀತಿ ಶಿಕ್ಷೆ ಕೊಡುವುದು ಎಷ್ಟು ಸರಿ.
10. ವರದಿ ಜಾತಿಯಾದರೆ ಹಲವು ಜನರ ಪಶ್ಚಿಮಘಟ್ಟ ಸಂರಕ್ಷಣೆ ಹೆಸರಿನಲ್ಲಿ ಹಣಮಾಡುವುದುಕ್ಕೂ ಕೂಡ ಈ ವರದಿ ಅನುಷ್ಠಾನಕ್ಕೆ ಹಲವು ಪ್ರಯತ್ನಿಸುತ್ತಿದ್ದಾರೆ ಎಂಬುವುದು ಪಶ್ಚಿಮಘಟ್ಟ ಮತ್ತು ಮಲೆನಾಡಿಗರ ಆರೋಪವಾಗಿದೆ.
11. ಅಕೇಶಿಯಾ ನಿಲಗಿರಿಯಂತಹ ಅಂತರ್ಜಲ ಹೀರುವಂತಹ ಕಾಡು ಬೆಳೆಸುವ ಬದಲು ನೈಸರ್ಗಿಕ ಕಾಡು ಬೆಳೆಸಲಿ, ಕೆರೆಗಳ ಅಭಿವೃದ್ಧಿ ಮಾಡಲಿ, ಕಾಡುಗಳಲ್ಲಿ ಇಂಗು ಗುಂಡಿ ಮಾಡಲಿ, ಕಾಡುಗಲ್ಲಿ ನೀರು ಶೇಕರಣೆವಾಗುವಂತಹ ಯೋಜನೆಗನ್ನು ರೂಪಿಸಲಿ ಅದನ್ನು ಬಿಟ್ಟು ಅಕೇಶಿಯಾ ನೀಲಗಿರಿ ಇಂದ ಅರಣ್ಯ ಇಲಾಖೆ ಮತ್ತು ಸರ್ಕಾರಕ್ಕೆ ಹಣ ಸಿಗುತ್ತದೆ ಹೊರತು ಕಾಡು ಉಳಿಯುವುದಿಲ್ಲ.
12. ಅಕ್ರಮ ಗಣಿಗಾರಿಕೆ , ಅಕ್ರಮ ಮರಳು ದಂದೆ, ಅಕ್ರಮವಾಗಿ ದೊಡ್ಡ ಮಟ್ಟದಲ್ಲಿ ಕಾಡುಗಳನ್ನು ಒತ್ತುವರಿ ಮಾಡಿ ಕಟ್ಟಡ,ರೆಸಾರ್ಟ್ ಗಳನ್ನು ,10-20 ಎಕರೆ ತೋಟಮಾಡುವವರಿಗೆಲ್ಲಾ ಸರಿಯಾದ ಕಾನೂನು ಬರಲಿ ಎಂಬುವುದೇ ಪಶ್ಚಿಮಘಟ್ಟ ಮತ್ತು ಮಲೆನಾಡಿಗರ ಮನದಾಳದ ಮಾತಾಗಿದೆ.
ಕೊನೆಯದಾಗಿ ಹೇಳುವುದಾದರೆ ನಮ್ಮ ಅಜ್ಜ ಮುತ್ತಜ್ಜ ಹೀಗೆ ಹಲವು ತಲೆ ತಲಾಂತರಗಳಿಂದ ಬೆಳೆಸಿ, ಉಳಿಸಿಕೊಂಡು ಬಂದಿರುವ ಪರಿಸರ ಮತ್ತು ಅರಣ್ಯವನ್ನು ಮುಂದೆ ಕೂಡ ಸೂಕ್ತ ರೀತಿಯಲ್ಲಿ ಬೆಳಿಸಿಕೊಂಡು ಮತ್ತು ಉಳಿಸಿಕೊಂಡು ಹೋಗುವುದು ನಮಗೆ ಗೊತ್ತು ಅದನ್ನು ಕಸ್ತೂರಿ ರಂಗನ್ ವರದಿಯಿಂದಾಗಲಿ ಅಥವಾ ಬೇರೆ ಯಾವುದೇ ವರದಿಯಿಂದ ಸಂರಕ್ಷಣೆಯ ಪಾಠ ನಮಗೆ ಬೇಕಿಲ್ಲ ಎನ್ನುವುದು ಪಶ್ಚಿಮಘಟ್ಟದವರ ಮತ್ತು ಮಲೆನಾಡಿಗರ ಅಭಿಪ್ರಾಯವಾಗಿದೆ.


0 Comments:
Post a Comment
Subscribe to Post Comments [Atom]
<< Home