Sunday, January 12, 2020

50 ವರ್ಷಕ್ಕೂ ಅಧಿಕ ಇತಿಹಾಸವಿರುವ ಕೋಟೆಮಕ್ಕಿ ಶಾಲೆಯಲ್ಲಿ ಶಿಕ್ಷಕರ ಕೊರತೆ!!!!


ಇತ್ತೀಚ್ಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೆ ಹೆಚ್ಚು. ಆದರೂ ಮಲೆನಾಡಿನಾದ್ಯಂತ ಇಂದಿಗೂ ಕೂಡ ಸರ್ಕಾರಿ ಶಾಲೆಗಳು ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ. ಆದರೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಟೆಮಕ್ಕಿ (ಇಡಕಣಿ) ಶಾಲೆಯಲ್ಲಿ ಕಳೆದ 3 ತಿಂಗಳಿಂದ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 
50 ವರ್ಷಕ್ಕೂ ಅಧಿಕ ಇತಿಹಾಸವಿರುವ ಕೋಟೆಮಕ್ಕಿ ಶಾಲೆಯಲ್ಲಿ ಶಿಕ್ಷಕರ ಕೊರತೆಇದ್ದು ಈ ಶಾಲೆಯಲ್ಲಿ ಒಟ್ಟು 16 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಈಗ ಈ ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಶಾಲೆಯಲ್ಲಿ ಇನ್ನೊಬ್ಬರು ಅತಿಥಿ ಶಿಕ್ಷಕರಿದ್ದು ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆ ಯಾವುದೇ ಗೌರವಧನ ನೀಡಿರಲಿಲ್ಲ. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಪೋಷಕರು ಸೇರಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಆ ಅತಿಥಿ ಶಿಕ್ಷಕರಿಗೆ ಗೌರವಧನ ನೀಡಿದ್ದರು  ಇಲಾಖೆ ಯಾವುದೇ ಗೌರವಧನ ಕೂಡ ನೀಡಿರಲಿಲ್ಲ.   
 ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಲ್ಲದೆ ಅವರಿಗೆ ಪೋಷಕರೆ ಸಂಬಳ ನೀದಿರುವುದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೇ ಶಾಲಾ ಕಟ್ಟಡಕೂಡ ಶಿಥಿಲಗೊಂಡಿದ್ದು ಅದೂ ಕೂಡ ಮುಂದಿನ ಮಳೆಗಾಲದಲ್ಲಿ ಏನಾಗುವುದೋ ಎಂಬುವುದು ಪೋಷಕರ ಆತಂಕವಾಗಿದೆ. ಈ ಗ್ರಾಮದಲ್ಲಿ ಯಾವುದೇ ಖಾಸಗಿ ಶಾಲೆ ಕೂಡ ಇಲ್ಲ ಹೀಗಿದ್ದಾಗ ಮಕ್ಕಳ ಭವಿಷ್ಯ ಮುಂದೇನು ಎಂಬುವುದು ಪೋಷಕರ ಆತಂಕವಾಗಿದೆ. ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಕೆಲವು ವರ್ಷಗಳ ಹಿಂದೆ ಹೆಮ್ಮಕ್ಕಿ ಸರ್ಕಾರಿ ಶಾಲೆ ಕೂಡ ಮುಚ್ಚಲಾಗಿದೆ ಹೀಗೆ ಮುಂದುವರಿದರೆ ಈ ಶಾಲೆ ಕೂಡ ಮುಚ್ಚುವ ದಿನ ದೂರವಿಲ್ಲ. ಆ ಹಂತಕ್ಕೆ ಹೋಗುವುದಕ್ಕಿಂತ ಮುಂಚೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

0 Comments:

Post a Comment

Subscribe to Post Comments [Atom]

<< Home