ಇಂದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಕಂಕಣ ಸೂರ್ಯಗ್ರಹಣ; ಬೆಂಗಳೂರಿನಲ್ಲಿ ಗೋಚರವಾಗೋದು ಡೌಟ್
ಇಂದು ಬೆಳಗ್ಗೆ ಸಂಭವಿಸುವ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು ಎಂದು ಪ್ರಮೋದ್ ಗಲಗಲಿ ಎಚ್ಚರಿಕೆ ನೀಡಿದ್ದಾರೆ. ಈ ಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು. ಸುರಕ್ಷಿತಾ ವಿಧಾನವಾದ ಸೋಲಾರ್ ಗಾಗಲ್ಸ್, ವೆಲ್ಡರ್ಸ್ ಗ್ಲಾಸ್, ಅಲ್ಟ್ರಾ ವೈಲೆಟ್ ರೇಸ್ ಮೂಲಕ ಗ್ರಹಣ ವೀಕ್ಷಿಸಬಹುದು. 2010 ರಲ್ಲಿ ಈ ಕಂಕಣ ಗ್ರಹಣ ಗೋಚರವಾಗಿತ್ತು. ಅದಾದ ಬಳಿಕ ಈ ವರ್ಷ ಬರುತ್ತಿದೆ ಎಂದರು.
ಇಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಿವೆ. ಯಾವುದೇ ಪೂಜೆ-ಪುನಸ್ಕಾರ ಇರುವುದಿಲ್ಲ. ಇಂದು ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದ ಬಗ್ಗೆ ಬೆಂಗಳೂರು ನೆಹರೂ ತಾರಾಯಲದ ನಿರ್ದೇಶಕ ಪ್ರಮೋದ್ ಗಲಗಲಿ ಮಾಹಿತಿ ನೀಡಿದ್ದಾರೆ.
9 ವರ್ಷಗಳ ಬಳಿಕ ಸಂಭವಿಸುತ್ತಿರುವ ಕಂಕಣ ಸೂರ್ಯ ಗ್ರಹಣ ಇದಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ವಿಜ್ಞಾನಿಗಳು ಹಾಗೂ ಜನರು ಕಾತರರಾಗಿದ್ದಾರೆ. ಬೆಂಗಳೂರು ನೆಹರೂ ಪ್ಲಾನಿಟೋರಿಯಂನಲ್ಲಿ ಸೂರ್ಯಗ್ರಹಣ ವೀಕ್ಷಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 5 ಟೆಲಿಸ್ಕೋಪ್ ಇರಿಸಲಾಗಿದೆ. ಸಿಲೋಸ್ಟಾಟ್ ನ ಮೂಲಕ ಗ್ರಹಣ ವೀಕ್ಷಣೆ ಮಾಡಲಾಗುತ್ತದೆ. ಸಿಲೋಸ್ಟಾಟ್ ಮೂಲಕ ಸೂರ್ಯನ ಚಲನೆ ನೋಡಬಹುದಾಗಿದೆ. ಸೋಲಾರ್ ಗಾಗಲ್ಸ್ ಗಳನ್ನು ನೀಡಲಾಗುತ್ತದೆ. ಸೋಲಾರ್ ಗಾಗಲ್ಸ್ ನಿಂದ ಸೂರ್ಯನನ್ನು ನೋಡಬಹುದು. ಯಾವುದೇ ಬೈನಾಕ್ಯುಲರ್ ಬಳಕೆ ಮಾಡುವಂತಿಲ್ಲ. ಬೆಳಕಿನ ತೀಕ್ಷ್ಣ ತೆ ಹೆಚ್ಚಿರುವ ಹಿನ್ನೆಲೆ ಬೈನಾಕ್ಯುಲರ್ ವ್ಯವಸ್ಥೆ ಕಲ್ಪಿಸಿಲ್ಲ.

0 Comments:
Post a Comment
Subscribe to Post Comments [Atom]
<< Home