ಉಪನ್ಯಾಸಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು.
ಕಳಸ : ಉಪನ್ಯಾಸಕರೊಬ್ಬರು ವಿದ್ಯಾರ್ಥಿಯನ್ನು ಮನಬಂದಂತೆ ತಳಿಸಿ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ತರಗತಿ ನಡೆಯುತ್ತಿರುವ ವೇಳೆ ವಿದ್ಯಾರ್ಥಿಯು ಹಿಂದೆ ತಿರುಗಿ ನಕ್ಕಿದ್ದ ಎಂಬ ಕಾರಣಕ್ಕೆ ಉಪನ್ಯಾಸಕರು ತರಗತಿಯಿಂದ ಹೊರ ನಡೆಯುವಂತೆ ಸೂಚಿಸಿದ್ದು, ವಿದ್ಯಾರ್ಥಿಕೂಡ ಅವರ ಮಾತಿಗೆ ಬೆಲೆ ಕೊಟ್ಟು ಹೊರನಡೆದು ತನ್ನ ತಪ್ಪಿಗೆ ಶಿಕ್ಷೆಯನ್ನು ಕೂಡ ಪಡೆದಿದ್ದನು. ಆದರೆ ಇದರಿಂದ ತೃಪ್ತನಾಗದ ಉಪನ್ಯಾಸಕ ಮುಂದಿನ ಅವಧಿ ತರಗತಿಗೂ ಹೊರ ನಡೆಯುವಂತೆ ಸೂಚಿಸಿದ್ದು ಆಗಲೂ ಕೂಡ ಮರು ಮಾತಾನಾಡದೆ ವಿದ್ಯಾರ್ಥಿ ಹೊರ ನಡೆಯುತ್ತಿರುವಾಗ ಉಪನ್ಯಾಸಕ ವಿದ್ಯಾರ್ಥಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದು ಆ ವೇಳೆ ವಿದ್ಯಾರ್ಥಿಯು ನೆಲಕ್ಕುರುಳಿದ್ದಾನೆ. ಈ ವೇಳೆ ಆ ಉಪನ್ಯಾಸಕರ ಜೊತೆ ಇನ್ನೊಬ್ಬ ಉಪನ್ಯಾಸಕ ಕೂಡ ಸೇರಿ ಆ ವಿದ್ಯಾರ್ಥಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಜೊತೆಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಸಂಪೂರ್ಣ ವಿವರ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ ಆದರೆ ಉಪನ್ಯಾಸಕರು ನಮ್ಮ ಕಾಲೇಜಿನ ಸಿಸಿ ಕ್ಯಾಮರಾ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪೊಲೀಸರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಗೆ ನ್ಯಾಯ ಸಿಗುವವರೆಗೂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 Comments:
Post a Comment
Subscribe to Post Comments [Atom]
<< Home