Sunday, January 19, 2020

ಇಡಕಣಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ ಪ್ರಕಟ...... ಎಂ.ಪಿ. ಗಿರೀಶ್ ಬಣಕ್ಕೆ ಭರ್ಜರಿ ಗೆಲುವು.



ಇಡಕಣಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ ಪ್ರಕಟ. ಎಂ.ಪಿ. ಗಿರೀಶ್ ಬಣಕ್ಕೆ ಭರ್ಜರಿ ಗೆಲುವು.

ತೀವ್ರ ಕುತೂಹಲದಿಂದ ಕೂಡಿದ್ದ ಇಡಕಣಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ ನಿನ್ನೆ ತಡರಾತ್ರಿ ಪ್ರಕಟಗೊಂಡಿದೆ.ಸಣ್ಣಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಚುನಾವಣೆ ಮತ್ತು ಫಲಿತಾಂಶ ಪ್ರಕಟದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಘಟಾನುಘಟಿಗಳ ಪ್ರತಿಷ್ಠೆಯ ಕಣವಾಗಿದ್ದರಿಂದ ಮುಂಚಾಗೃತ ಕ್ರಮವಾಗಿ ಒಂದು ಕೆ.ಎಸ್.ಆರ್.ಪಿ ತುಕುಡಿಯನ್ನು ನಿಯೋಜಿಸಲಾಗಿತ್ತು.

ಈ ಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿ ಗೆ ಪ್ರತಿಷ್ಠೆಯ ಕಣವಾಗಿತ್ತು ಕಳೆದ 5 ವರ್ಷದಿಂದ ಸಹಕಾರ ಸಂಘದಲ್ಲಿ ಹತೋಟಿ ಸಾಧಿಸಿದ್ದ ಬಿಜೆಪಿಯ ಎಂ.ಪಿ. ಗಿರೀಶ್  ಮತ್ತು ಕಾಂಗ್ರೆಸ್ ನ ಬೆಂಬಲಿತ ಅಭ್ಯರ್ಥಿಗಳ ಪರ ಇದ್ದ ಕೆ.ಆರ್.ಪ್ರಭಾಕರ ಗೌಡ ಅವರ ಪ್ರತಿಷ್ಠೆಯ ಚುನಾವಣೆ ಕೂಡ ಇದಾಗಿತ್ತು. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ  ಎಂ.ಪಿ. ಗಿರೀಶ್ ಬಣ ಮೇಲುಗೈ ಸಾಧಿಸಿದೆ. ಗಿರೀಶ್ ಬಣದಿಂದ 12 ಅಭ್ಯರ್ಥಿಗಳ್ಳಲಿ 11 ಜನ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. 

ಪ್ರತಿಸ್ಪರ್ಧಿ ವಿಶ್ವನಾಥ್  ಬಣದಿಂದ ಕೇವಲ ಒಬ್ಬ ಅಭ್ಯರ್ಥಿ (ಸಾಲೇತರ ಕ್ಷೇತ್ರದಿಂದ) ಮಾತ್ರ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಕಳಸ ಹೋಬಳಿಯ ಬಿಜೆಪಿಯ ಅಧ್ಯಕ್ಷರಾದ ಗಿರೀಶ್ ಅವರು ತಮ್ಮ ಪ್ರಭಾವವನ್ನು ಸಾಭೀತು ಪಡಿಸಿದ್ದಾರೆ.

0 Comments:

Post a Comment

Subscribe to Post Comments [Atom]

<< Home