ಸಾರ್ವಜನಿಕ ಶೌಚಾಲಯ ಸೌಲಭ್ಯ ವಂಚಿತ ಹಿರೇಬೈಲ್ ಪಟ್ಟಣ!
ಇಡಕಣಿ ಮತ್ತು ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಿರೇಬೈಲ್ ಎಂಬ ಪಟ್ಟಣದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯವಿಲ್ಲದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಸುತ್ತಮುತ್ತಲಿನ ಕೆಲವು ಹಳ್ಳಿಗಳಿಗೆ ಹಿರೇಬೈಲ್ ಒಂದು ಪಟ್ಟಣವಾಗಿದ್ದು ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹೀಗೆ ಇನ್ನಿತರ ಸೌಲಭ್ಯಗಳು ಹಿರೇಬೈಲ್ ನಲ್ಲಿ ಇದ್ದು ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಿರೇಬೈಲ್ ಪಟ್ಟಣಕ್ಕೆ ಆಗಮಿಸುತ್ತಾರೆ. ಜೊತೆಗೆ ಈ ಪಟ್ಟಣ ಕೊಟ್ಟಿಗೆಹಾರ ಮತ್ತು ಕಳಸದ ಮುಖ್ಯ ರಸ್ತೆಯಲ್ಲಿದೆ. ಹಿರೇಬೈಲ್ ಪಟ್ಟಣದಿಂದ ಸಮೀಪದ ಹೆಮ್ಮಕ್ಕಿ, ಕೋಟೆಮಕ್ಕಿ, ಎಡೂರು, ಗುಮ್ಮನ್ ಖಾನ್, ಏಳಂದೂರು ಹೀಗೆ ಕೆಲವು ಹಳ್ಳಿಗಳಿಗೆ ಬಸ್ ಸೌಲಭ್ಯಕೂಡ ಇಲ್ಲ ಹಾಗಾಗಿ ಸಾರ್ವಜನಿಕರು ತಮ್ಮ ಊರಿಂದ ಬರಲು ಮತ್ತು ವಾಪಸ್ ತೆರಳಲು ಜೀಪ್, ಆಟೋದಂತಹ ವಾಹನಗಳನ್ನು ಆಶ್ರಯಿಸಿಬೇಕಿದ್ದು, ಕೆಲವೊಮ್ಮೆ ವಾಹನಗಳಿಗೆ ಕೆಲವು ಸಮಯ ಕಾಯಬೇಕಾಗದ ಅನಿವಾರ್ಯತೆ ಕೂಡ ಇದೆ.
ಇಂತಹ ಒಂದು ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಇರುವುದರಿಂದ ಸಾರ್ವಜನಿಕರು ಅದರಲ್ಲೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಇಡಕಣಿ ಮತ್ತು ಮರಸಣಿಗೆ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಂಡು ಶೀಘ್ರದಲ್ಲೇ ಹಿರೇಬೈಲ್ ಪಟ್ಟಣದಲ್ಲಿ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂಬುವುದು ಸಾರ್ವಜನಿಕ ಬೇಡಿಕೆಯಾಗಿದೆ.
"ನಾವು ಬೆಳಗ್ಗೆ ಹಿರೇಬೈಲ್ ಗೆ ಬಂದರೆ ಕೆಲವೊಮ್ಮೆ ನಾವು ಬಂದ ಕೆಲಸ ಬೇಗ ಆಗದ ಕಾರಣ ಅಥವಾ ಬೇರೆ ಊರಿಂದ ಇಲ್ಲಿಗೆ ಬಂದಾಗ ಇಲ್ಲಿಂದ ನಮ್ಮ ಊರಿಗೆ ಹೋಗಲು ಬಸ್ ಸೌಲಭ್ಯ ಇಲ್ಲದ ಕಾರಣ ಖಾಸಗಿ ವಾಹನಕ್ಕೆ ಕಾಯಬೇಕು ಈ ಸಮಯದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಶೌಚಾಲಯ ಹೋಗಬೇಕಾದ ಸಂದರ್ಭ ಬಂದರೆ ಇಲ್ಲೆಲ್ಲೂ ಕೂಡ ಶೌಚಾಲಯ ಸೌಲಭ್ಯವಿಲ್ಲ ಇದರಿಂದ ಮುಖ್ಯವಾಗಿ ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಿದ್ದು ಅದಷ್ಟುಬೇಗ ಹಿರೇಬೈಲ್ ನಲ್ಲಿ ಸಾರ್ವಜನಿಕ ಶೌಚಾಲಯ ಆಗಲಿ".
ಹೆಸರು ಹೇಳಲು ಇಚ್ಛಿಸದ ಮಹಿಳೆ


0 Comments:
Post a Comment
Subscribe to Post Comments [Atom]
<< Home