ಕೊನೆಗೂ ಕಾಫಿನಾಡಿಗೆ ವಕ್ಕರಿಸಿದ ಕೊರೋನಾ.
ಚಿಕ್ಕಮಗಳೂರು : ಇದುವರೆಗೂ ಗ್ರೀನ್ ಝೋನ್ ನಲ್ಲಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಇದೀಗ ಕೆಂಪು ವಲಯದತ್ತ ವಾಲುತ್ತಿದೆ. ಇದೂವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದೇ ಸೇಫ್ ಆಗಿದ್ದ ಜಿಲ್ಲೆಯಲ್ಲಿ ಇದೀಗ ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಜಿಲ್ಲೆಯಲ್ಲಿ ಇದೀಗ ಆತಂಕ ಹೆಚ್ಚಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ದೃಡಪಡಿಸಿವೆ. ಈ ಹಿನ್ನಲೆಯಲ್ಲಿ ಆ ವೈದ್ಯರ ಟ್ರಾವೆಲ್ ಹಿಸ್ಟರಿಯನ್ನು ಆಧಿಕಾರಿಗಳು ಕಲೆಹಾಕುತಿದ್ದು ಆ ವೈದ್ಯರ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಹಚ್ಚುವ ಕಾರ್ಯಕೂಡ ನಡೆಯಲಿದೆ.
ಮೂಡಿಗೆರೆಯಲ್ಲಿ ಪಾಸಿಟಿವ್ ಬಂದ ಹಿನ್ನಲಯಲ್ಲಿ ಪಟ್ಟಣವನ್ನು ಸೀಲ್ ಡೌನ್ ಮಾಡಲಾಗಿದ್ದು ಪಟ್ಟಣದಾದ್ಯಂತ ಆತಂಕ ಮನೆಮಾಡಿದೆ.


0 Comments:
Post a Comment
Subscribe to Post Comments [Atom]
<< Home