Monday, April 6, 2020

ವಾಮಚಾರಕ್ಕಾಗಿ ಗೂಬೆ ಸಂಗ್ರಹ ಆರೋಪಿ ಬಂಧನ.

ಮಲೆನಾಡಿನಾದ್ಯಂತ ಇತ್ತೀಚೆಗೆ ವನ್ಯಪ್ರಾಣಿಗಳನ್ನು ಹಿಡಿದು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅವರಿಂದ ಪ್ರಾಣಿಗಳನ್ನು ರಕ್ಷಿಸುವುದೇ ಅರಣ್ಯ ಇಲಾಖೆಗ ದೊಡ್ಡ ತಲೆನೋವಾಗಿದೆ. ಈ ಸಂಬಂಧ ಭಾನುವಾರ ಅಕ್ರಮವಾಗಿ ಗೂಬೆ ಸಾಗಣೆ ಮಾಡುತ್ತಿದ್ದ ಓರ್ವ ವೈಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಚಿಕ್ಕಮಗಳೂರು ಜಿಲ್ಲೆ ತಣಿಗೆಬೈಲ್ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಭದ್ರಾ ಮೀಸಲು ಅರಣ್ಯ ಕ್ಷೇತ್ರದಲ್ಲಿ ಚಂದ್ರಶೇಖರ ಎಂಬಾತ ಅಕ್ರಮವಾಗಿ ಗೂಬೆಯನ್ನು ಹಿಡಿದು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಒಂದು ಗೂಬೆಯನ್ನು ವಶಪಡಿಸಿಕೊಂಡು ಆರೋಪಿಯನ್ನು ತರಿಕೇರೆ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ ವಾಮಾಚಾರಕ್ಕಾಗಿ ಈ ಗೂಬೆಗಳನ್ನು ಬಳಸುವುದರಿಂದ ಇದಕ್ಕೆ ಬೇಡಿಕೆ ಹೆಚ್ಚಿದ್ದು ಇತನೂ ಕೂಡ  ವಾಮಚಾರಿಗಳಿಗೆ ನೀಡುವುದಕ್ಕಾಗಿ ಗೂಬೆಗಳನ್ನು ಸಂಗ್ರಹಿಸುತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ
 ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಪೋರೆಪ್ಪ, ಅರಣ್ಯಧಿಕಾರಿಗಳಾದ ರಾಘವೇಂದ್ರ, ರಾಜೇಶ್, ಮಧು ಮತ್ತು ಪ್ರವೀಣ್ ಕುಮಾರ್ ಪಾಲ್ಗೊಂಡಿದ್ದರು.

0 Comments:

Post a Comment

Subscribe to Post Comments [Atom]

<< Home