ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡದ ಅರಣ್ಯ ಇಲಾಖೆ – ರಂಗನಾಥ್
ಜಯಪುರ: ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ, ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದೆ ಕಾಫೀ ಬೆಳಗಾರ ದಿನೇಶ್ ಹೆಬ್ಬಾರ್‍ರವರ 3 ಎಕರೆ ಕಾಫಿ ತೋಟವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಖುಲ್ಲಾ ಮಾಡಿದ್ದಾರೆ. ಇದು ಬೆಳೆಗಾರರ ಮೇಲೆ ಇಲಾಖೆ ಏಸಗಿರುವ ದೌರ್ಜನ್ಯವಾಗಿದ್ದು ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘ ಇದನ್ನು ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ರಂಗನಾಥ್ ಹೇಳಿದರು.
ಹೇರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೇದಕ್ಕಿಯ ಕೃಷಿಕ ದಿನೇಶ್ ಹೆಬ್ಬಾರ್ ರವರ ಖುಲ್ಲಾ ಮಾಡಿರುವ ಕಾಫಿ ತೋಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸುಮಾರು 30 ವರ್ಷಗಳ ಹಿಂದಿನ ಕಾಫಿಗಿಡಗಳನ್ನು ಮಾಲೀಕರಿಗೆ ತಿಳಿಸದೆ ಕತ್ತರಿಸಿ ಹಾಕಿರುವ ಅರಣ್ಯ ಇಲಾಖೆಯ ದಬ್ಬಾಳಿಕೆಯನ್ನು ಸಹಿಸಲಾಗುವುದಿಲ್ಲ, ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಜಮೀನಿನ ಬೇಲಿಯನ್ನು ತೆರವು ಮಾಡಬಹುದೇ ವಿನಃ ಗಿಡ ಕಡಿಯುವಂತಿಲ್ಲ. ಸುಮಾರು 1500ಕ್ಕೂ ಹೆಚ್ಚು ಹೂ ತುಂಬಿ ನಿಂತ ಗಿಡಗಳನ್ನು ಕತ್ತರಿಸುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದಾರೆ. ಒತ್ತುವರಿ ಮಾಡಿರುವ ತೋಟವನ್ನು ತೆರವೂ ಮಾಡದಂತೆ ನ್ಯಾಯಾಲಯದ ತಡೆಯಾಜ್ಞೆ ಇದ್ದರು ಗಿಡಗಳನ್ನು ಕತ್ತರಿಸಿರುವ ಉದ್ದೇಶವೇನು ಎಂಬುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. ಈ ಬಗ್ಗೆ ಸಹ್ಯಾದ್ರಿ ಬೆಳೆಗಾರರ ಸಂಘ ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ರಾಮೇಗೌಡ, ಅರ್ಥರ್ ಡಿಸೋಝಾ ಇತರರು ಹಾಜರಿದ್ದರು.


0 Comments:
Post a Comment
Subscribe to Post Comments [Atom]
<< Home