ಕಳ್ಳರಕಾಟದಿಂದ ಬೆಚ್ಚಿಬಿದ್ದ ಮಲೆನಾಡು.
ಮಲೆನಾಡಿನ ಸ್ವಚ್ಚಂದ ಹಸಿರು ಪರಿಸರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಮನೆಗಳಿರುವುದು ಸಹಜ. ಇಂತಹ ಮಲೆನಾಡಿನ ಶಾಂತಿಯುತ ಪರಿಸರದಲ್ಲಿ ಹದಿನೈದಕ್ಕೂ ಹೆಚ್ಚು ಜನರಿದ್ದ ದರೋಡೆಕೋರರ ಗುಂಪೆÇಂದು ಮನೆ ಮಾಲಿಕ ಹಾಗೂ ಕುಟುಂಬದ ಸದಸ್ಯರನ್ನು ಕಟ್ಟಿಹಾಕಿ ಲಕ್ಷಾಂತರ ರೂಗಳ ನಗನಾಣ್ಯಗಳನ್ನು ದೋಚಿದ ಘಟನೆ ಜಯಪುರ ಪೋಲೀಸ್ ಠಾಣಾ ವ್ಯಾಪ್ತಿಯ ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಗುಡ್ಡೇತೋಟ ಸಣ್ಣಮನೆ ಕೃಷಿಕ ವಿಜಯರಾಘವರ ಮನೆಗೆ ಶುಕ್ರವಾರ ತಡರಾತ್ರಿ 12:30ಕ್ಕೆ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದರೋಡೆಕೋರರ ಗುಂಪೊಂದು ಮನೆಯ ಮಾಲಿಕ ಸೇರಿದಂತೆ ಪತ್ನಿ ಹಾಗೂ ಕೆಲಸದವರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಒಂದು ದೊಡ್ಡ ವಾಹನ ಹಾಗೂ ಎರಡು ಕಾರುಗಳಲ್ಲಿ ಬಂದ ಹದಿನೈದಕ್ಕೂ ಹೆಚ್ಚು ಜನರಿದ್ದ ದರೋಡೆಕೋರರ ಗುಂಪೊಂದು ಸುಮಾರು ಎರಡು ಘಂಟೆಗಳ ಕಾಲ ದರೋಡೆ ನಡೆಸಿದ್ದಲ್ಲದೆ, ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿದ್ದಾರೆ. ಗುಂಪಿನಲ್ಲಿದ್ದ ಎಲ್ಲರೂ ಜೀನ್ಸ ಪ್ಯಾಂಟ್, ಟೀಶರ್ಟ, ಶೂ ಹಾಗೂ ಮುಖಕ್ಕೆ ಮಂಕಿಕ್ಯಾಪ್ ಕೈಗಳಿಗೆ ಹ್ಯಾಂಡ್ ಗ್ಲೌಸ್ ಧರಿಸಿದ್ದರು. ದರೋಡೆಕೋರರು ಕತ್ತಿ, ಲಾಂಗ್, ಕಿಟಕಿ, ಬಾಗಿಲು ಮುರಿಯುವ ಸಲಕರಣೆಗಳು, ಕಬ್ಬಿಣ ಕತ್ತರಿಸುವ ಕಟ್ಟಿಂಗ್ ಮಿಷನ್ ಹೊಂದಿದ್ದರು ಎಂದು ದೂರಿನಲ್ಲಿ ಮನೆಯ ಮಾಲೀಕರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ವೃತ್ತ ನಿರೀಕ್ಷಕರು, ಡಿವೈಎಸ್ಪಿ, ಜಯಪುರ ಠಾಣೆಯ ಎಸ್.ಐ. ಹಾಗೂ ಸಿಬ್ಬಂದಿಗಳು ಮತ್ತು ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಕಳ್ಳರಕಾ ಮಲೆನಾಡಿನ ಸ್ವಚ್ಚಂದ ಹಸಿರು ಪರಿಸರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಮನೆಗಳಿರುವುದು ಸಹಜ. ಇಂತಹ ಮಲೆನಾಡಿನ ಶಾಂತಿಯುತ ಪರಿಸರದಲ್ಲಿ ಹದಿನೈದಕ್ಕೂ ಹೆಚ್ಚು ಜನರಿದ್ದ ದರೋಡೆಕೋರರ ಗುಂಪೆÇಂದು ಮನೆ ಮಾಲಿಕ ಹಾಗೂ ಕುಟುಂಬದ ಸದಸ್ಯರನ್ನು ಕಟ್ಟಿಹಾಕಿ ಲಕ್ಷಾಂತರ ರೂಗಳ ನಗನಾಣ್ಯಗಳನ್ನು ದೋಚಿದ ಘಟನೆ ಜಯಪುರ ಪೋಲೀಸ್ ಠಾಣಾ ವ್ಯಾಪ್ತಿಯ ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಗುಡ್ಡೇತೋಟ ಸಣ್ಣಮನೆ ಕೃಷಿಕ ವಿಜಯರಾಘವರ ಮನೆಗೆ ಶುಕ್ರವಾರ ತಡರಾತ್ರಿ 12:30ಕ್ಕೆ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದರೋಡೆಕೋರರ ಗುಂಪೊಂದು ಮನೆಯ ಮಾಲಿಕ ಸೇರಿದಂತೆ ಪತ್ನಿ ಹಾಗೂ ಕೆಲಸದವರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಒಂದು ದೊಡ್ಡ ವಾಹನ ಹಾಗೂ ಎರಡು ಕಾರುಗಳಲ್ಲಿ ಬಂದ ಹದಿನೈದಕ್ಕೂ ಹೆಚ್ಚು ಜನರಿದ್ದ ದರೋಡೆಕೋರರ ಗುಂಪೊಂದು ಸುಮಾರು ಎರಡು ಘಂಟೆಗಳ ಕಾಲ ದರೋಡೆ ನಡೆಸಿದ್ದಲ್ಲದೆ, ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿದ್ದಾರೆ. ಗುಂಪಿನಲ್ಲಿದ್ದ ಎಲ್ಲರೂ ಜೀನ್ಸ ಪ್ಯಾಂಟ್, ಟೀಶರ್ಟ, ಶೂ ಹಾಗೂ ಮುಖಕ್ಕೆ ಮಂಕಿಕ್ಯಾಪ್ ಕೈಗಳಿಗೆ ಹ್ಯಾಂಡ್ ಗ್ಲೌಸ್ ಧರಿಸಿದ್ದರು. ದರೋಡೆಕೋರರು ಕತ್ತಿ, ಲಾಂಗ್, ಕಿಟಕಿ, ಬಾಗಿಲು ಮುರಿಯುವ ಸಲಕರಣೆಗಳು, ಕಬ್ಬಿಣ ಕತ್ತರಿಸುವ ಕಟ್ಟಿಂಗ್ ಮಿಷನ್ ಹೊಂದಿದ್ದರು ಎಂದು ದೂರಿನಲ್ಲಿ ಮನೆಯ ಮಾಲೀಕರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ವೃತ್ತ ನಿರೀಕ್ಷಕರು, ಡಿವೈಎಸ್ಪಿ, ಜಯಪುರ ಠಾಣೆಯ ಎಸ್.ಐ. ಹಾಗೂ ಸಿಬ್ಬಂದಿಗಳು ಮತ್ತು ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ದರೋಡೆಗೊಳಗಾದ ಗುಡ್ಡೇತೋಟ ಸಣ್ಣಮನೆ ಕೃಷಿಕ ವಿಜಯರಾಘವರ ಮನೆ.

0 Comments:
Post a Comment
Subscribe to Post Comments [Atom]
<< Home