ಅಕ್ರಮ ಆನೆದಂತ ಸಾಗಾಟ ನಾಲ್ವರ ಬಂಧನ. ಚಿಕ್ಕಮಗಳೂರು ಪೋಲೀಸರ ಮಿಂಚಿನ ಕಾರ್ಯಚರಣೆ.
ಅಕ್ರಮ ಆನೆದಂತ ಸಾಗಾಟ ನಾಲ್ವರ ಬಂಧನ. ಚಿಕ್ಕಮಗಳೂರು ಪೋಲೀಸರ ಮಿಂಚಿನ ಕಾರ್ಯಚರಣೆ
ಅಕ್ರಮವಾಗಿ ದಂತ ಸಾಗಣೆ ಮಾಡುತಿದ್ದ ಶೃಂಗೇರಿ ತಾಲೂಕಿನ ಪ್ರಭಾವಿ ರಾಜಕಾರಣಿಯವರ ಬಲಗೈ ಬಂಟನಾಗಿದ್ದ ಶಬರೀಶ ಮತ್ತು ಅವನ ಜೊತೆ ಇದ್ದ 3 ಜನ ಸಹಚರರನ್ನು ಬಂಧಿಸಿದ್ದ ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು ಮೂಗ್ತಿಹಳ್ಳಿ ಬಳಿ KA 18 1426 ಸೆಲಾರಿಯೋ ಕಾರಿನಲ್ಲಿ ಅಕ್ರಮವಾಗಿ ಅನೆದಂತ ಮತ್ತು 5 ಲಕ್ಷ ಹಣವನ್ನು ಸಾಗಿಸಿತ್ತಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೋಲಿಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಜನ ಜಂಗುಳಿ ಹೆಚ್ಚಾಗಿರುವುದರಿಂದ ಆ ಸಮಯದಲ್ಲಿ ಸುಲಭವಾಗಿ ಪೋಲಿಸರಿಂದ ತಪ್ಪಿಸಿಕೊಳ್ಳಬಹುದೆಂಧು ಸಂಚು ರೂಪಿಸಿದ್ದರು ಆದರೆ, ಮಿಂಚಿನದಾಳಿ ನಡೆಸಿದ ಚಿಕ್ಕಮಗಳೂರು ಪೋಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.ಅಕ್ರಮ ದಂತ ಸಾಗಟದ ಪ್ರಮುಖ ಆರೋಪಿಯಾಗಿರುವ ಶಬರೀಶ್ ಎಂಬುವವನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಐಟಿ ಸೆಲ್ ನ ಮುಖ್ಯಸ್ಥ ಮತ್ತು ಶೃಂಗೇರಿ ಶಾಸಕ ರಾಜೇಗೌಡ ಅವರ ಆಪ್ತ ಎಂದು ಮಾಹಿತಿ ದೊರೆತಿದ್ದು ಉಳಿದ ಆರೋಪಿಗಳನ್ನು ಯೋಗಿಶ್, ವಿಜಯ್ ಮತ್ತು ಮಧುಸೂದನ್ ಎಂದು ಗುರುತಿಸಲಾಗಿದೆ.



0 Comments:
Post a Comment
Subscribe to Post Comments [Atom]
<< Home