ಎಚ್ಚರ..ವಿಶ್ವವ್ಯಾಪ್ತಿಯಾಗುತ್ತಿದೆ ಡೆಡ್ಲಿ 'ಕೊರೊನಾ ವೈರಸ್'.!
ಬೀಜಿಂಗ್:
ಚೀನಾದಲ್ಲಿ ಹಬ್ಬಿರುವ ಮಹಾಮಾರಿಗೆ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ
ಹೆಚ್ಚುತ್ತಿದೆ. ಕೊರೊನಾ ಸೋಂಕಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ ಸದ್ಯ 563ಕ್ಕೆ ತಲುಪಿದೆ.ವರದಿ ಪ್ರಕಾರ ಮಂಗಳವಾರ 73 ಮಂದಿ ಮೃತಪಟ್ಟಿದ್ದು, 3,887 ಮಂದಿ ಹೊಸ
ಸೋಂಕಿತರು ಪತ್ತೆಯಾಗಿದ್ದಾರೆ.
ಎಲ್ಲೆಲ್ಲಿ
ಪ್ರಕರಣ ಪತ್ತೆ..?
ಶ್ರೀಲಂಕಾದಲ್ಲಿ
1, ಮಲೇಷ್ಯಾದಲ್ಲಿ 14 ಕಾಂಬೋಡಿಯಾದಲ್ಲಿ 1 ಹಾಗೂ ವಿಯೆಟ್ನಾನಲ್ಲಿ 10 ಪ್ರಕರಣಗಳು ವರದಿಯಾಗಿದ್ರೆ, ಥಾಯ್ಲೆಂಡ್‌ನಲ್ಲಿ 25 ಪ್ರಕರಣಗಳು ಪತ್ತೆಯಾಗಿದೆ, ಸಿಂಗಾಪುರದಲ್ಲಿ 28 ಪ್ರಕರಣಗಳು ವರದಿಯಾಗಿದ್ರೆ, ಜರ್ಮನಿಯಲ್ಲಿ 12 ಪ್ರಕರಣ, ನೇಪಾಳದಲ್ಲಿ 1 ಪ್ರಕರಣ ಹಾಗೂ ಭಾರತದಲ್ಲಿ ಈವರೆಗೆ 3 ಪ್ರಕರಣ ವರದಿಯಾಗಿದೆ ಎಂಬ ಮಾಹಿತಿ
ಲಭ್ಯವಾಗಿದೆ.
ಇನ್ನೂ, ಕೆನಡಾ ದೇಶದಲ್ಲಿ 5 ಕೊರೊನಾ ಸೋಂಕಿತರು
ಪತ್ತೆಯಾಗಿದ್ದಾರೆ. ಅಮೆರಿಕದಲ್ಲಿ 15 ಮಂದಿಗೆ ಕೊರೊನಾ ತಗುಲಿದ್ದು, ಫ್ರಾನ್ಸ್‌ನಲ್ಲಿ 6 ಪ್ರಕರಣ, ಸ್ಪೇನ್‌ನಲ್ಲಿ 1 ಪ್ರಕರಣ ಹಾಗೂ ಯುಎಇನಲ್ಲಿ 5 ಪ್ರಕರ ಪತ್ತೆಯಾಗಿದೆ..
ಬೆಲ್ಜಿಯಂನಲ್ಲಿ 1 ಬ್ರಿಟನ್‌ನಲ್ಲಿ
2 ಪ್ರಕರಣ, ಫಿನ್ಲೆಂಡ್‌ನಲ್ಲಿ 1 ಪ್ರಕರಣ, ಪತ್ತೆಯಾಗಿದೆ. ಚೀನಾದಲ್ಲಿ
ಹಬ್ಬಿರುವ ಮಹಾಮಾರಿಗೆ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ
ಹೆಚ್ಚುತ್ತಿದ್ದು, ಇಡೀ
ವಿಶ್ವವನ್ನೇ ತಲ್ಲಣಗೊಳಿಸಿದೆ.


0 Comments:
Post a Comment
Subscribe to Post Comments [Atom]
<< Home