ಆರೋಗ್ಯ ತಪಾಸಣಾ ಶಿಬಿರ
ಕಳಸ: ಕಳಸದ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಇದೇ 15ರಂದು ವಿಶೇಷ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಈ ಶಿಬಿರ ನಡೆಯಲಿದ್ದು.ಈ ಶಿಬಿರದಲ್ಲಿ ಹೃದಯರೋಗ ತಜ್ಞ, ಕಿವಿ, ಮೂಗು ಮತ್ತು ಗಂಟಲು ತಜ್ಞ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ, ಮೂಳೆ ಮತ್ತು ಕೀಲುರೋಗ ತಜ್ಞ, ಕ್ಯಾನ್ಸರ್ ತಜ್ಞ, ಶಸ್ತ್ರ ಚಿಕಿತ್ಸಕ, ಮಕ್ಕಳ ತಜ್ಞ, ನೇತ್ರ ತಜ್ಞ ಮತ್ತು ದಂತ ತಜ್ಞರು ಭಾಗವಹಿಸಲಿದ್ದು, ಎಲ್ಲಾ ಸೇವೆಗಳು ಉಚಿತವಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


0 Comments:
Post a Comment
Subscribe to Post Comments [Atom]
<< Home