ನ್ಯಾಯ ಬೆಲೆ ಅಂಗಡಿಯಲ್ಲಿ ಅಂತರ ಮರೆತ ಮಲೆನಾಡಿಗರು! ಸೊಸೈಟಿ ಅಧಿಕಾರಿಗಳಿಂದಲೂ ಜಾಣ ಮೌನ ?
ಒಂದೆಡೆ ವಿಶ್ವಾದ್ಯಂತ ಕೊರೋನಾ ಮಹಾಮಾರಿ ಜನರ ಜೀವ ಹಿಂಡುತ್ತಿದ್ದರೆ ಇತ್ತ ಕೆಲವರು ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಗುಂಪು ಗುಂಪಾಗಿ ಇರುವ ದೃಶ್ಯ ಗಳು ಕೆಲವೆಡೆ ಕಂಡುಬರುತ್ತಿದ್ದು ಲಾಕ್ ಡೌನ್ ಪಾಲನೆಯಲ್ಲಿ ಕೆಲವರು ಎಡವುತ್ತಿರುವುದು ದುರಂತವೇ ಸರಿ.
ಇಂತಹ ಒಂದು ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಇಡಕಣಿ ಪಡಿತರ ಕೇಂದ್ರದಲ್ಲಿ ನಡೆದಿದ್ದು, ಸೊಸೈಟಿ ಮುಂದೆ ಅಕ್ಷರಶಃ ಮಾರುಕಟ್ಟೆಯ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲಿ ನೋಡಿದರೂ ಜನವೇ ಜನ ಒಬ್ಬರಿಂದ ಒಬ್ಬರಿಗೆ ಒಂದು ಅಡಿ ಕೂಡ ಅಂತರವಿಲ್ಲದಂತೆ ಪಡಿತರ ಕೊಳ್ಳಲು ಸುಮರು 300 ಮಂದಿ ಸಾಲುಗಟ್ಟಿ ನಿಂತಿರುವ ದೃಶ್ಯ ಇಡಕಣಿ ಪಡಿತರ ಕೇಂದ್ರದಲ್ಲಿ ಕಂಡುಬಂದಿತ್ತು.
ಪೊಲೀಸರ ಮೇಲೆ ಗೂಬೆ ಕೂರಿಸಿದ ಸಾರ್ವಜನಿಕರು:
ಕಳಸ ಠಾಣಾ ಪೊಲೀಸರು ಬೆಳಗ್ಗೆಯೇ ಇಡಕಣಿ ಪಡಿತರ ಕೇಂದ್ರಕ್ಕೆ ಆಗಮಿಸಿ ಪ್ರತಿಯೊಬ್ಬರಿಗೂ ಅಂತರ ಕಾಯ್ದಕೊಳ್ಳಲು ಸೂಚಿಸಿದ್ದು ಮಾತ್ರವಲ್ಲದೆ ಹಲವು ಕಡೆ ವೃತ್ತಗಳನ್ನು ಹಾಕಿ ಅಲ್ಲೇ ನಿಂತು ಸರದಿ ಸಾಲಿನಲ್ಲಿ ಬಂದು ಪಡಿತರ ಕೊಳ್ಳುವಂತೆ ಸೂಚಿಸಿದ್ದರು. ಆದರೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸದ ಪಡಿತರ ಕೇಂದ್ರದ ಸಿಬ್ಬಂದಿಗಳು ಜನರು ಅಂತರವಿಲ್ಲದೆ ನಿಂತಿದ್ದರೂ ಕೂಡ ಅದನ್ನು ನೋಡಿ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮೂಕ ಪ್ರೇಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವರು ಇದನ್ನು ಸೆರೆ ಹಿಡಿದು ಖಾಸಗಿ ಸುದ್ದಿ ಸಂಸ್ಥೆಗಳಿಗೆ ಕೊಟ್ಟು ಪೊಲೀಸರ ಮೇಲೆ ಗೂಬೆ ಕೂರಿಸಿದರು.
ಈ ಹಿನ್ನಲೆಯಲ್ಲಿ ಕೆಲವು ಖಾಸಗಿ ಮಾಧ್ಯಮಗಳು ಪೊಲೀಸರು ಈ ಕಡೆ ತಿರುಗಿಯೂ ನೋಡುತ್ತಿಲ್ಲ ಎಂಬಂತಹ ಹೇಳಿಕೆ ಪ್ರಕಟಿಸಿದ್ದು ಇದು ಕೆಲವು ಪೊಲೀಸರ ಬೇಸರಕ್ಕೂ ಕಾರಣವಾಯಿತು.
ಜನರ ಕಷ್ಟಕ್ಕ ಸ್ಪಂದಿಸದ ಸಹಕಾರ ಸಂಘದ ಆಡಳಿತ ಮಂಡಳಿ:
ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ಪ್ರಾಥಮಿಕ ಕೃಷಿ ಸಹಕಾರ ಸಂಘದ ಯಾವುದೇ ಪದಾಧಿಕಾರಿಗಳು ಇತ್ತ ಸುಳಿಯದೆ ಇದ್ದಿದ್ದೂ ಜೊತೆಗೆ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.





0 Comments:
Post a Comment
Subscribe to Post Comments [Atom]
<< Home