ವಿದೇಶದಿಂದ ಬಂದಿರುವವರಿಗೆ ವಾಪಸ್ ಅವರ ದೇಶಕ್ಕೆ ತೆರಳಲು ಇಲ್ಲಿದೆ ಮಾಹಿತಿ!
ಭಾರತದಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಹೀಗಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ.ಲಾಕ್‌ಡೌನ್‌ಗಿಂತ ಮೊದಲು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಹಲವು ವಿದೇಶಿಯರು ಇಲ್ಲೇ ಸಿಲುಕಿಕೊಂಡಿದ್ದು, ಅಂತಾರಾಷ್ಟ್ರೀಯ ವಿಮಾನಗಳು ಕೂಡ ಸಂಚಾರವನ್ನು ಸ್ಥಗಿತಗೊಳಿಸಲಿದೆ. ಏಕಾಏಕಿ ಲಾಕ್‌ಡೌನ್ ಮಾಡಿದ್ದರಿಂದ ಅವರು ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗಿಲ್ಲ.
ಅಂತವರನ್ನು ಪತ್ತೆ ಹಚ್ಚಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಹಾಯವಾಣಿಯನ್ನು ತೆರೆದಿದೆ. ಜೊತೆಗೆ strandedindia.com ಎನ್ನುವ ವೆಬ್‌ಸೈಟ್‌ನ್ನು ಕೂಡ ತೆರೆದಿದೆ. ಅದರಲ್ಲಿ ಕೊವಿಡ್ 19 ಸಹಾಯವಾಣಿ, ಇ-ಮೇಲ್ ಐಡಿ ಹಾಗೂ ವಾಟ್ಸಾಪ್ ನಂಬರ್‌ನ್ನು ನೀಡಲಾಗಿದೆ.ಅದರಲ್ಲಿ ನಿಮ್ಮ ಹೆಸರು, ಯಾವ ದೇಶದಿಂದ ಭಾರತಕ್ಕೆ ಬಂದಿದ್ದೀರಿ, ಭಾರತದ ಯಾವ ಪ್ರದೇಶದಲ್ಲಿ ನೀವು ಸಿಲುಕಿದ್ದೀರಿ, ಮೊಬೈಲ್ ನಂಬರ್, ಇ-ಮೇಲ್ ಐಡಿ ಹಾಗೂ ನಿಮ್ಮ ಮಾತುಗಳನ್ನು ಅಲ್ಲಿ ನೀಡಿರುವ ಮೆಸೇಜ್ ಬಾಕ್ಸ್‌ನಲ್ಲಿ ತಿಳಿಸಬಹುದಾಗಿದೆ.
ಬಳಿಕ ಸಬ್‌ಮಿಟ್ ನೀಡಬೇಕು. ಕೊವಿಡ್ 19 ಸಹಾಯವಾಣಿ ಸಂಖೆ ಇಂತಿದೆ: +91-11-23978046 ಅಥವಾ 1075ಗೆ ಕರೆ ಮಾಡಿ.
ಹೆಲ್ಪ್‌ಲೈನ್ ಇ-ಮೇಲ್ ವಿಳಾಸ:ncov2019@gov.in
ncov2019@gov.com
ವಾಟ್ಸಾಪ್ ನಂಬರ್: +91 9013151515.

0 Comments:
Post a Comment
Subscribe to Post Comments [Atom]
<< Home