Thursday, April 16, 2020

ನ್ಯಾಯ ಬೆಲೆ ಅಂಗಡಿಯಲ್ಲಿ ಅಂತರ ಮರೆತ ಮಲೆನಾಡಿಗರು! ಸೊಸೈಟಿ ಅಧಿಕಾರಿಗಳಿಂದಲೂ ಜಾಣ ಮೌನ ?





ಒಂದೆಡೆ ವಿಶ್ವಾದ್ಯಂತ ಕೊರೋನಾ ಮಹಾಮಾರಿ ಜನರ ಜೀವ ಹಿಂಡುತ್ತಿದ್ದರೆ ಇತ್ತ ಕೆಲವರು ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಗುಂಪು ಗುಂಪಾಗಿ ಇರುವ ದೃಶ್ಯ ಗಳು ಕೆಲವೆಡೆ ಕಂಡುಬರುತ್ತಿದ್ದು ಲಾಕ್ ಡೌನ್ ಪಾಲನೆಯಲ್ಲಿ ಕೆಲವರು ಎಡವುತ್ತಿರುವುದು ದುರಂತವೇ ಸರಿ.
ಇಂತಹ ಒಂದು ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಇಡಕಣಿ ಪಡಿತರ ಕೇಂದ್ರದಲ್ಲಿ ನಡೆದಿದ್ದು, ಸೊಸೈಟಿ ಮುಂದೆ ಅಕ್ಷರಶಃ ಮಾರುಕಟ್ಟೆಯ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲಿ ನೋಡಿದರೂ ಜನವೇ ಜನ ಒಬ್ಬರಿಂದ ಒಬ್ಬರಿಗೆ ಒಂದು ಅಡಿ ಕೂಡ ಅಂತರವಿಲ್ಲದಂತೆ ಪಡಿತರ ಕೊಳ್ಳಲು ಸುಮರು 300 ಮಂದಿ ಸಾಲುಗಟ್ಟಿ ನಿಂತಿರುವ ದೃಶ್ಯ ಇಡಕಣಿ ಪಡಿತರ ಕೇಂದ್ರದಲ್ಲಿ ಕಂಡುಬಂದಿತ್ತು.

ಪೊಲೀಸರ ಮೇಲೆ ಗೂಬೆ ಕೂರಿಸಿದ ಸಾರ್ವಜನಿಕರು:

ಕಳಸ ಠಾಣಾ ಪೊಲೀಸರು ಬೆಳಗ್ಗೆಯೇ ಇಡಕಣಿ ಪಡಿತರ ಕೇಂದ್ರಕ್ಕೆ ಆಗಮಿಸಿ ಪ್ರತಿಯೊಬ್ಬರಿಗೂ ಅಂತರ ಕಾಯ್ದಕೊಳ್ಳಲು ಸೂಚಿಸಿದ್ದು ಮಾತ್ರವಲ್ಲದೆ ಹಲವು ಕಡೆ ವೃತ್ತಗಳನ್ನು ಹಾಕಿ ಅಲ್ಲೇ ನಿಂತು ಸರದಿ ಸಾಲಿನಲ್ಲಿ ಬಂದು ಪಡಿತರ ಕೊಳ್ಳುವಂತೆ ಸೂಚಿಸಿದ್ದರು. ಆದರೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸದ ಪಡಿತರ ಕೇಂದ್ರದ ಸಿಬ್ಬಂದಿಗಳು ಜನರು ಅಂತರವಿಲ್ಲದೆ ನಿಂತಿದ್ದರೂ ಕೂಡ ಅದನ್ನು ನೋಡಿ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮೂಕ ಪ್ರೇಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವರು ಇದನ್ನು ಸೆರೆ ಹಿಡಿದು ಖಾಸಗಿ ಸುದ್ದಿ ಸಂಸ್ಥೆಗಳಿಗೆ ಕೊಟ್ಟು ಪೊಲೀಸರ ಮೇಲೆ ಗೂಬೆ ಕೂರಿಸಿದರು.
ಈ ಹಿನ್ನಲೆಯಲ್ಲಿ ಕೆಲವು ಖಾಸಗಿ ಮಾಧ್ಯಮಗಳು ಪೊಲೀಸರು ಈ ಕಡೆ ತಿರುಗಿಯೂ ನೋಡುತ್ತಿಲ್ಲ ಎಂಬಂತಹ ಹೇಳಿಕೆ ಪ್ರಕಟಿಸಿದ್ದು ಇದು ಕೆಲವು ಪೊಲೀಸರ ಬೇಸರಕ್ಕೂ ಕಾರಣವಾಯಿತು.

ಜನರ ಕಷ್ಟಕ್ಕ ಸ್ಪಂದಿಸದ ಸಹಕಾರ ಸಂಘದ ಆಡಳಿತ ಮಂಡಳಿ:

ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ಪ್ರಾಥಮಿಕ ಕೃಷಿ ಸಹಕಾರ ಸಂಘದ ಯಾವುದೇ ಪದಾಧಿಕಾರಿಗಳು ಇತ್ತ ಸುಳಿಯದೆ ಇದ್ದಿದ್ದೂ ಜೊತೆಗೆ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Saturday, April 11, 2020

ವಿದೇಶದಿಂದ ಬಂದಿರುವವರಿಗೆ ವಾಪಸ್ ಅವರ ದೇಶಕ್ಕೆ ತೆರಳಲು ಇಲ್ಲಿದೆ ಮಾಹಿತಿ!



ಭಾರತದಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಹೀಗಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ.ಲಾಕ್‌ಡೌನ್‌ಗಿಂತ ಮೊದಲು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಹಲವು ವಿದೇಶಿಯರು ಇಲ್ಲೇ ಸಿಲುಕಿಕೊಂಡಿದ್ದು, ಅಂತಾರಾಷ್ಟ್ರೀಯ ವಿಮಾನಗಳು ಕೂಡ ಸಂಚಾರವನ್ನು ಸ್ಥಗಿತಗೊಳಿಸಲಿದೆ. ಏಕಾಏಕಿ ಲಾಕ್‌ಡೌನ್ ಮಾಡಿದ್ದರಿಂದ ಅವರು ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗಿಲ್ಲ.

ಅಂತವರನ್ನು ಪತ್ತೆ ಹಚ್ಚಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಹಾಯವಾಣಿಯನ್ನು ತೆರೆದಿದೆ. ಜೊತೆಗೆ strandedindia.com ಎನ್ನುವ ವೆಬ್‌ಸೈಟ್‌ನ್ನು ಕೂಡ ತೆರೆದಿದೆ. ಅದರಲ್ಲಿ ಕೊವಿಡ್ 19 ಸಹಾಯವಾಣಿ, ಇ-ಮೇಲ್ ಐಡಿ ಹಾಗೂ ವಾಟ್ಸಾಪ್ ನಂಬರ್‌ನ್ನು ನೀಡಲಾಗಿದೆ.ಅದರಲ್ಲಿ ನಿಮ್ಮ ಹೆಸರು, ಯಾವ ದೇಶದಿಂದ ಭಾರತಕ್ಕೆ ಬಂದಿದ್ದೀರಿ, ಭಾರತದ ಯಾವ ಪ್ರದೇಶದಲ್ಲಿ ನೀವು ಸಿಲುಕಿದ್ದೀರಿ, ಮೊಬೈಲ್ ನಂಬರ್, ಇ-ಮೇಲ್ ಐಡಿ ಹಾಗೂ ನಿಮ್ಮ ಮಾತುಗಳನ್ನು ಅಲ್ಲಿ ನೀಡಿರುವ ಮೆಸೇಜ್ ಬಾಕ್ಸ್‌ನಲ್ಲಿ ತಿಳಿಸಬಹುದಾಗಿದೆ.

ಬಳಿಕ ಸಬ್‌ಮಿಟ್ ನೀಡಬೇಕು. ಕೊವಿಡ್ 19 ಸಹಾಯವಾಣಿ ಸಂಖೆ ಇಂತಿದೆ: +91-11-23978046 ಅಥವಾ 1075ಗೆ ಕರೆ ಮಾಡಿ.

ಹೆಲ್ಪ್‌ಲೈನ್ ಇ-ಮೇಲ್ ವಿಳಾಸ:ncov2019@gov.in

ncov2019@gov.com

ವಾಟ್ಸಾಪ್ ನಂಬರ್: +91 9013151515.

Monday, April 6, 2020

ವಾಮಚಾರಕ್ಕಾಗಿ ಗೂಬೆ ಸಂಗ್ರಹ ಆರೋಪಿ ಬಂಧನ.

ಮಲೆನಾಡಿನಾದ್ಯಂತ ಇತ್ತೀಚೆಗೆ ವನ್ಯಪ್ರಾಣಿಗಳನ್ನು ಹಿಡಿದು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅವರಿಂದ ಪ್ರಾಣಿಗಳನ್ನು ರಕ್ಷಿಸುವುದೇ ಅರಣ್ಯ ಇಲಾಖೆಗ ದೊಡ್ಡ ತಲೆನೋವಾಗಿದೆ. ಈ ಸಂಬಂಧ ಭಾನುವಾರ ಅಕ್ರಮವಾಗಿ ಗೂಬೆ ಸಾಗಣೆ ಮಾಡುತ್ತಿದ್ದ ಓರ್ವ ವೈಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಚಿಕ್ಕಮಗಳೂರು ಜಿಲ್ಲೆ ತಣಿಗೆಬೈಲ್ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಭದ್ರಾ ಮೀಸಲು ಅರಣ್ಯ ಕ್ಷೇತ್ರದಲ್ಲಿ ಚಂದ್ರಶೇಖರ ಎಂಬಾತ ಅಕ್ರಮವಾಗಿ ಗೂಬೆಯನ್ನು ಹಿಡಿದು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಒಂದು ಗೂಬೆಯನ್ನು ವಶಪಡಿಸಿಕೊಂಡು ಆರೋಪಿಯನ್ನು ತರಿಕೇರೆ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ ವಾಮಾಚಾರಕ್ಕಾಗಿ ಈ ಗೂಬೆಗಳನ್ನು ಬಳಸುವುದರಿಂದ ಇದಕ್ಕೆ ಬೇಡಿಕೆ ಹೆಚ್ಚಿದ್ದು ಇತನೂ ಕೂಡ  ವಾಮಚಾರಿಗಳಿಗೆ ನೀಡುವುದಕ್ಕಾಗಿ ಗೂಬೆಗಳನ್ನು ಸಂಗ್ರಹಿಸುತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ
 ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಪೋರೆಪ್ಪ, ಅರಣ್ಯಧಿಕಾರಿಗಳಾದ ರಾಘವೇಂದ್ರ, ರಾಜೇಶ್, ಮಧು ಮತ್ತು ಪ್ರವೀಣ್ ಕುಮಾರ್ ಪಾಲ್ಗೊಂಡಿದ್ದರು.