ದೇಶಾದ್ಯಂತ ಒಂದೆಡೆ ಕೊರೊನಾ ಜನರ ಜೀವ ಹಿಂಡುತ್ತಿದ್ದರೆ ಇತ್ತ ಕೇಂದ್ರ ಸರ್ಕಾರ ವಿಜಯ್ ಮಲ್ಯ, ನೀರವ್ ಮೋದಿಯಂತಹ ಘಟಾನುಘಟಿಗಳ ಸಾಲ ಮನ್ನಾ ಮಾಡಿದ್ಯಾ ಎಂಬ ಹಲವು ಗೊಂದಲಗಳು ಕೂಡ ಸಾಮಾನ್ಯರನ್ನು ಕಾಡುತ್ತಿದೆ. ಹಾಗಾದ್ರೆ ಕೇಂದ್ರ ಸರ್ಕಾರ ಸುಮಾರು 68.607 ಕೋಟಿ ಸಾಲ ಮನ್ನಾ ಮಾಡ ಲಿದೆಯೇ ಎಂಬ ಗೊಂದಲಗಳು ಸಾರ್ವಜನಿಕರನ್ನು ಕಾಡತೊಡಗಿದೆ.
ಹಾಗಾದ್ರೆ ಈ ರೈಟ್ ಆಫ್ ಅಂದ್ರೆ ಏನು? ಅದರಿಂದ ಯಾರಿಗೆ ಲಾಭ ಯಾರಿಗೆ ನಷ್ಟ ?
ರೈಟ್ ಆಫ್ ಎಂದರೆ ಖಂಡಿತವಾಗಿಯೂ ಸಾಲಮನ್ನಾ ಅಲ್ಲ. ಇದು ಬ್ಯಾಂಕ್ ಗಳು ತಮ್ಮ ದಾಖಲೆಗಳಿಂದ ಇವರ ಸಾಲವನ್ನು ಹೊರಗಿಡುವ ಪ್ರಕ್ರಿಯೆ ಆಗಿದೆ ಹೊರತು ಸಂಪೂರ್ಣ ಸಾಲ ಮನ್ನಾ ಮಾಡುವ ಯೋಜನೆಯಲ್ಲ.
ಈ ರೈಟ್ ಆಫ್ ಪ್ರಕ್ರಿಯೆಯಲ್ಲಿ ಸಾಲ ಬಾಕಿ ಉಳಿಸಿಕೊಂಡಿರುವವರ ಅಥವಾ ತಲೆ ಮರೆಸಿಕೊಂಡಿರುವವರ ಅಸ್ತಿಗಳನ್ನು ಹಾರಾಜು ಹಾಕಿ ಅವರು ತೆಗೆದು ಕೊಂಡಿರುವವರ ಸಾಲಕ್ಕೆ ಬಡ್ಡಿ ಸಮೇತ ವಸೂಲಾತಿ ಮಾಡುವ ಹಕ್ಕು ಕೂಡ ಈ ರೈಟ್ ಆಫ್ ಪದ್ಧತಿಯಲ್ಲಿದೆ.
ರೈಟ್ ಆಫ್ ಪದ್ದತಿಯಲ್ಲಿ ಬ್ಯಾಂಕ್ ಗಳು ಈ ರೀತಿಯ ಸಾಲಗಳನ್ನು ತಮ್ಮ ಬ್ಯಾಲೆನ್ಸ್ ಶೀಟ್ ಗಳಿಂದ ಹೊರಗಿಟ್ಟು ತಮ್ಮ ಲೆಕ್ಕ ಪತ್ರದಲ್ಲಿ ಇದರ ವಿವರಗಳನ್ನು ತೋರಿಸುವುದಿಲ್ಲ ಮತ್ತು ತಮ್ಮ ತ್ರೈಮಾಸಿಕ ಹಾಗೂ ವಾರ್ಷಿಕ ವರದಿಗಳಲ್ಲೂ ಕೂಡ ಈ ಸಾಲದ ವಿವರಗಳನ್ನು ಕಡತಗಳಲ್ಲಿ ನಮೂದಿಸಿರುವುದಿಲ್ಲ. ಈ ಸಾಲಗಳು ವಸೂಲಾತಿ ಆದರೆ ಅದನ್ನು ಲಾಭ ಎಂದು ತೋರಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಈ ರೈಟ್ ಆಫ್ ಪದ್ಧತಿಯಲ್ಲಿ ಎಲ್ಲರ ಸಾಲವು ಮನ್ನಾ ಆಗುತ್ತದೆ ಎನ್ನುವುದು ಶುದ್ಧ ಸುಳ್ಳು. ಈ ಪ್ರಕ್ರಿಯೆಯಲ್ಲಿ ಬ್ಯಾಂಕ್‌ಗಳಿಗೆ ತೆರಿಗೆ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ವಿನಃ ಸುಸ್ತಿ ಸಾಲ ಮನ್ನಾ ಮಾಡುವ ಯೋಜನೆಯಲ್ಲ.
ದಿಡೀರ್ ಸುದ್ದಿಯಾದ ರೈಟ್ ಆಫ್:
ರೈಟ್ ಆಪ್ ದಿಡೀರ್ ಸುದ್ದಿಯಾಗಳು ಕಾರಣರಾದವರು ಸಾಕೇತ್ ಗೋಖಲೆ ಇವರು RTI ಮುಕೇನಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೇಂದ್ರ ಸರ್ಕಾರ ಸುಸ್ತಿ ಸಾಲ ರೈಟ್ ಆಪ್ ಮಾಡಿದವರ ಪಟ್ಟಿಯನ್ನು ಕೇಳಿದ್ದರು. ಆ ಪಟ್ಟಿಯ ಪ್ರಕಾರ
ಕಿಂಗ್‌ಫಿಶರ್ ಏರ್‌ಲೈನ್ಸ್‌ನ 1,943 ಕೋಟಿ ರೂ ರುಚಿ ಸೋಯಾ ಇಂಡಸ್ಟ್ರೀಸ್‌ನ 2,212 ಕೋಟಿ ರೂ. ಸುಸ್ತಿ ಸಾಲವನ್ನು, ಗೀತಾಂಜಲಿ ಜೆಮ್ಸ್ ಲಿ.ನ 5,492 ಕೋಟಿ ರೂ ಗಳನ್ನು ಮತ್ತಿತ್ತರ ಸಂಸ್ಥೆಗಳ ಸಾಲವನ್ನು ರೈಟ್ ಆಪ್ ಪಟ್ಟಿಗೆ ಸೇರಿಸಲಾಗಿದೆ ಈ ಪಟ್ಟಿಯಲ್ಲಿ, ಆರ್‌ಇಐ ಆಗ್ರೊ ಲಿಮಿಟೆಡ್‌ನ 4,314 ಕೋಟಿ ರೂ, ಜತಿನ್ ಮೆಹ್ತಾ ಅವರ ವಿನ್‌ಸಮ್ ಡೈಮಂಡ್ಸ್ ಆ್ಯಂಡ್ ಜ್ಯುವೆಲ್ಲರಿಯ 4,076 ಕೋಟಿ ರೂ. ಸಾಲವನ್ನೂ ತಾಂತ್ರಿಕವಾಗಿ ರೈಟ್ ಆಫ್ ಎಂದು ಘೋಷಿಸಲಾಗಿದೆ.