ಮುಖರ್ಜಿ ಸಾವು ನಿಗೂಢ - ಜನ್ನಾಪುರ ರಘು
ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ ಅಂಗವಾಗಿ ಮೂಡಿಗೆರೆ ಶಾಸಕರಾದ ಎಂ ಪಿ ಕುಮಾರಸ್ವಾಮಿ, ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ರಘು ಜೆ ಎಸ್ ರವರು ಇಂದು ಮೂಡಿಗೆರೆ ಬಿಜೆಪಿ ಕಾರ್ಯಾಲಯದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಘು ಜನ್ನಾಪುರ ಮಾತನಾಡಿ ಅಖಂಡತೆಗೆ ಶ್ರಮಿಸಿದ ಧೀಮಂತರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ವಿಚಾರಧಾರೆ ಬಗ್ಗೆ ತಿಳಿಸಿದರು ಹಾಗೂ ಕಾಶ್ಮೀರವನ್ನು ಭಾರತದೊಂದಿಗೆ ಉಳಿಸಲು ಅವರು ಮಾಡಿದ ಹೋರಾಟದ ಬಗ್ಗೆ ಹಾಗೂ ಮುಖರ್ಜಿಯವರಿಗೆ ಜೈಲಿನಲ್ಲಿ ಊಟ, ವೈದ್ಯಕೀಯ ಸೌಲಭ್ಯದ ನೀಡಿದ್ದಾರೆ ಬಗ್ಗೆ ವಿಚಾರಣೆ ಆಗಬೇಕಾಗಿತ್ತು. ಆಗ ಅವರ ಸಾವಿಗೆ ಕಾರಣ ಕೂಡ ತಿಳಿಯುತ್ತಿತ್ತು ಆದರೆ ಇದರ ಬಗ್ಗೆ ಯಾವುದೇ ವಿಚಾರಣೆಯಾಗದ ಕಾರಣ ಅವರ ಸಾವು ಕೂಡ ನಿಗೂಢವಾಗಿ ಉಳಿಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಸರೋಜ ಸುರೇಂದ್ರ, ಮುಖಂಡರಾದ ಜಯಂತ್,ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಪಂಚಾಕ್ಷರಿ, ಗಜೇಂದ್ರ ಮತ್ತು ಶಶಿಧರ್, ತಾಲ್ಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ರವೀಂದ್ರ, ಸಾಮಾಜಿಕ ಜಾಲತಾಣ ಸಂಚಾಲಕರು, ಪಟ್ಟಣ ಪಂಚಾಯಿತಿ ಸದಸ್ಯರಾದ ಮನೋಜ್ ಕುಮಾರ್, ಆಶಾ ಮೋಹನ್, ಕಮಲಕ್ಕ,ಶಾಸಕರ ಆಪ್ತ ಕಾರ್ಯದರ್ಶಿ ಸಂದರ್ಶ್, ಸಹಕಾರ ಸಂಘ ಅಧ್ಯಕ್ಷರು, ನಿರ್ದೇಶಕರುಗಳು,ಪದಾಧಿಕಾರಿಗಳು, ಹಾಗೂ ಮತ್ತಿತರರು ಹಾಜರಿದ್ದರು.


0 Comments:
Post a Comment
Subscribe to Post Comments [Atom]
<< Home