ಮಲ್ನಾಡ್ ವಾಣಿ
ಮಲೆನಾಡಿನ ಕಾನನದ ನಡುವಿನ ಪರಿಸರದ ಹಲವು ವಿಷಯಗಳೊಂದಿಗೆ ಕಲೆ, ಸಾಹಿತ್ಯ,ಸಂಗೀತ, ಪ್ರತಿಭೆಗಳ ಅನಾವರಣ, ರಾಜಕೀಯ, ಕ್ರೀಡೆ ಹೀಗೆ ಹಲವು ಆಯಾಮಗಳೊಂದಿಗೆ ನಾವು ನಿಮ್ಮ ಮುಂದೆ ಬರುತ್ತಿದ್ದೇವೆ.
Tuesday, June 23, 2020
ಮುಖರ್ಜಿ ಸಾವು ನಿಗೂಢ - ಜನ್ನಾಪುರ ರಘು
ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ ಅಂಗವಾಗಿ ಮೂಡಿಗೆರೆ ಶಾಸಕರಾದ ಎಂ ಪಿ ಕುಮಾರಸ್ವಾಮಿ, ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ರಘು ಜೆ ಎಸ್ ರವರು ಇಂದು ಮೂಡಿಗೆರೆ ಬಿಜೆಪಿ ಕಾರ್ಯಾಲಯದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಘು ಜನ್ನಾಪುರ ಮಾತನಾಡಿ ಅಖಂಡತೆಗೆ ಶ್ರಮಿಸಿದ ಧೀಮಂತರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ವಿಚಾರಧಾರೆ ಬಗ್ಗೆ ತಿಳಿಸಿದರು ಹಾಗೂ ಕಾಶ್ಮೀರವನ್ನು ಭಾರತದೊಂದಿಗೆ ಉಳಿಸಲು ಅವರು ಮಾಡಿದ ಹೋರಾಟದ ಬಗ್ಗೆ ಹಾಗೂ ಮುಖರ್ಜಿಯವರಿಗೆ ಜೈಲಿನಲ್ಲಿ ಊಟ, ವೈದ್ಯಕೀಯ ಸೌಲಭ್ಯದ ನೀಡಿದ್ದಾರೆ ಬಗ್ಗೆ ವಿಚಾರಣೆ ಆಗಬೇಕಾಗಿತ್ತು. ಆಗ ಅವರ ಸಾವಿಗೆ ಕಾರಣ ಕೂಡ ತಿಳಿಯುತ್ತಿತ್ತು ಆದರೆ ಇದರ ಬಗ್ಗೆ ಯಾವುದೇ ವಿಚಾರಣೆಯಾಗದ ಕಾರಣ ಅವರ ಸಾವು ಕೂಡ ನಿಗೂಢವಾಗಿ ಉಳಿಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಸರೋಜ ಸುರೇಂದ್ರ, ಮುಖಂಡರಾದ ಜಯಂತ್,ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಪಂಚಾಕ್ಷರಿ, ಗಜೇಂದ್ರ ಮತ್ತು ಶಶಿಧರ್, ತಾಲ್ಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ರವೀಂದ್ರ, ಸಾಮಾಜಿಕ ಜಾಲತಾಣ ಸಂಚಾಲಕರು, ಪಟ್ಟಣ ಪಂಚಾಯಿತಿ ಸದಸ್ಯರಾದ ಮನೋಜ್ ಕುಮಾರ್, ಆಶಾ ಮೋಹನ್, ಕಮಲಕ್ಕ,ಶಾಸಕರ ಆಪ್ತ ಕಾರ್ಯದರ್ಶಿ ಸಂದರ್ಶ್, ಸಹಕಾರ ಸಂಘ ಅಧ್ಯಕ್ಷರು, ನಿರ್ದೇಶಕರುಗಳು,ಪದಾಧಿಕಾರಿಗಳು, ಹಾಗೂ ಮತ್ತಿತರರು ಹಾಜರಿದ್ದರು.
Friday, June 19, 2020
ಮನೆಮೇಲೆ ಉರುಳಿದ ಮರ ಸ್ಥಳಕ್ಕೆ ಬಾರದ ಜನಪ್ರತಿನಿಧಿಗಳು
ಚಿಕ್ಕಮಗಳೂರು : ಮಳೆ ಗಾಳಿಗೆ ರಭಸಕ್ಕೆ ನಿನ್ನೆ ಸುಮಾರು 5ಗಂಟೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಚ್ಚೀನಕುಡಿಗೆಯ ಸುರೇಶ್ ಗೌಡ ಎಂಬುವರ ಮನೆ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಮನೆಯೊಳಗಿದ್ದ ಸುರೇಶ್ ಗೌಡ ಅವರು ಗಾಯಗೊಂಡಿದ್ದು ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಸುರೇಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ಪರಿಣಾಮ ಮನೆ ಕೂಡ ಜಖಂ ಗೊಂಡಿದೆ. ಘಟನಾ ಸ್ಥಳಕ್ಕೆ ಪಿಡಿಒ ಭೇಟಿ ಕೊಟ್ಟಿದ್ದಾರೆ. ಆದರೆ ಇಷ್ಟೆಲ್ಲ ಆದರೂ ಕೂಡ ಇದುವರೆಗೂ ಯಾವುದೇ ಜನಪ್ರತಿನಿಧಿಗಳು ಭೇಟಿ ನೀಡಿದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Wednesday, June 17, 2020
Thursday, June 11, 2020
ಚಿಕ್ಕಮಗಳೂರಿನಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪತ್ತೆ
ಚಿಕ್ಕಮಗಳೂರು : ಕೊರೊನಾ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಈಗ ಮತ್ತೊಂದು ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಮತ್ತೊಮ್ಮೆ ಜಿಲ್ಲೆಯ ಜನರಲ್ಲಿ ಆತಂಕವನ್ನು ಸೃಷ್ಟಿಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಸ್.ಎಸ್.ಎಲ್.ಸಿ ಬಾಲಕನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈತನನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ.







