ಮೂಡಿಗೆರೆ ಮಂಡಲ ಪ್ರಶಿಕ್ಷಣ ವರ್ಗಕ್ಕೆ ಚಾಲನೆ.
ಮೂಡಿಗೆರೆ : ಭಾರತೀಯ ಜನತಾ ಪಾರ್ಟಿಯ ಮೂಡಿಗೆರೆ ಮಂಡಲದ ಪ್ರಶಿಕ್ಷಣ ವರ್ಗಕ್ಕೆ ಮುಡಿಗೆರೆಯ ರೈತ ಭವನದಲ್ಲಿ ಶನಿವಾರ ಚಾಲನೆ ದೊರೆಯಿತು.
ಈ ಪ್ರಶಿಕ್ಷಣ ವರ್ಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೂಡಿಗೆರೆ ಮಂಡಲ
ಅಧ್ಯಕ್ಷರಾದ ರಘು ಜೆ ಎಸ್,ಶಾಸಕರಾದ ಎಂ ಪಿ ಕುಮಾರಸ್ವಾಮಿ, ಪ್ರಭಾರಿಗಳಾದ ರಾಜ್ ಶೇಖರ್, ಜಿಲ್ಲಾ ಅಧ್ಯಕ್ಷರಾದ ಕಲ್ಮರುಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟರು, ಜಿಲ್ಲಾ ಕಾರ್ಯದರ್ಶಿ ಮನೋಜ್ ಹಳೆಕೊಟೆ, ಕಾರ್ಯಕ್ರಮ ಸಂಚಾಲಕರಾದ ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿಗಳಾದ ಪಂಚಾಕ್ಷರಿ ಮತ್ತು ಗಜೇಂದ್ರ ಮತ್ತು ಶಶಿಧರ್ ಜಾವಳಿ, ಮಹೇಶ್ ಬೆರಣಗೊಡು ಹಾಜರಿದ್ದರು.
ಪ್ರಶಿಕ್ಷಣ ವರ್ಗದಲ್ಲಿ ಒಟ್ಟು 9 ಗೋಷ್ಠಿಗಳು ನಡೆದಿದ್ದು, ಸಂಪನ್ಮೂಲ ವ್ಯೆಕ್ತಿಗಳು ಹಲವಾರು ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು. ಸುಮಾರು 100ಕ್ಕೂ ಹೆಚ್ಚು ಶಿಭಿರಾರ್ಥಿಗಳು ಈ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿದ್ದರು.
ನಾಳೆ ಪ್ರಶಿಕ್ಷಣ ವರ್ಗದ ಅಂತಿಮ ದಿನವಾಗಿದ್ದು, ಹಲವು ವಿಚಾರ ಮಂಡನೆಗಳೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.


