Monday, August 31, 2020

ಇಂದು ಸಿಸಿಬಿ ಮುಂದೆ ಸತ್ಯ ಬಾಯ್ಬಿಚ್ಚಲಿರುವ ಇಂದ್ರಜಿತ್ ಲಂಕೇಶ್.


ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಇಂದು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಅವರು, ಚಿತ್ರರಂಗದ ಯಾರ ಹೆಸರುಗಳನ್ನು ಬಹಿರಂಗಪಡಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಕಚೇರಿ ಒಳಗೆ ಹೋಗುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಮೊದಲು ನಾನು ಸಿಸಿಬಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ನನಗೆ ಯಾರ ಒತ್ತಡವೂ ಇಲ್ಲ. ನಾನು ಯಾರಿಗೂ ಹೆದರಲ್ಲ. ವಿಚಾರಣೆ ಮುಗಿಸಿ ಹೊರಬಂದ ಬಳಿಕ ಮಾಧ್ಯಮಗಳ ಜೊತೆ ವಿಸ್ತೃತವಾಗಿ ಮಾತನಾಡುವೆ' ಎಂದು ಹೇಳಿದ್ದಾರೆ.
                                     More News

0 Comments:

Post a Comment

Subscribe to Post Comments [Atom]

<< Home