ಬೆಂಗಳೂರು ಶ್ರೀರಾಮ ಸೇನೆ ವತಿಯಿಂದ "ಶ್ರೀಗುರುದೇವ ದತ್ತ ಜಪಯಜ್ಞ"
ಬೆಂಗಳೂರು ನಗರ ಶ್ರೀರಾಮ ಸೇನೆ ವತಿಯಿಂದ ನಗರದ ಶ್ರೀ ವಿದ್ಯಾವಾಚಸ್ಪತಿ ಸಂತೋಷ ಗುರೂಜೀಯವರ ಆಯುರ್ ಆಶ್ರಮದಲ್ಲಿ "ಒಂದು ಕೋಟಿ ಶ್ರೀಗುರುದೇವ ದತ್ತರ" ಜಪದ ಯಜ್ಞ ಮಾಡಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಸಂತೋಷ ಗುರೂಜೀ “ಹಿಂದೆ ಲೋಕ ಕಲ್ಯಾಣಕ್ಕಾಗಿ ಯಜ್ಞ ಯಾಗಾದಿಗಳನ್ನು ರಾಜ ಮಹಾರಾಜರು ಮಾದುತ್ತಿದ್ದರು, ಅದರೆ ಇಂದು ಶ್ರೀರಾಮ ಸೇನೆ ಒಂದು ಕೋಟಿ ಶ್ರಿಗುರುದೇವ ದತ್ತರ ಜಪ ಮಾಡುವುದರ ಮೂಲಕ ಕರೋನಾ ಓಡಿಸುವ ಮತ್ತು ದತ್ತ ಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕೆಂಬ ಮಹಾಸದುದ್ದೇಶದಿಂದ ಈ ಜಪಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಂದಿನ ಈ ಧರ್ಮಕಾರ್ಯದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ” ಎಂದು ಆಶೀರ್ವದಿಸಿದರು.
ಶ್ರೀರಾಮ ಸೇನೆಯ ಬೆಂಗಳೂರು ನಗರ ಅಧ್ಯಕ್ಷ ಚಂದ್ರಶೇಖರ್ (ಕೋಟೆ ಶೇಕಿ) ಮಾತನಾಡಿ ಹಿಂದೆ ಪ್ರಪಂಚದ ಅನ್ಯಾಯಗಳನ್ನು ಸರಿಪಡಿಸುವುದಕ್ಕೆ ದೇವರು ಅವತಾರ ಎತ್ತಬೇಕಿತ್ತು ಆದರೆ ಇವತ್ತು ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕೆ, ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ನಡೆಸುವುದಕ್ಕಾಗಿ ಮತ್ತು ಅನ್ಯಾಯವನ್ನು ಹಿಮ್ಮೆಟ್ಟಿಸಿ ನ್ಯಾಯದ ಪರ ಹೋರಾಟಕ್ಕಾಗಿ ಶ್ರೀರಾಮ ಸೇನೆ ಇದೆ" ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಅರುಣ್ ಪರಮೇಶ್‍ರವರನ್ನು ಬೆಂಗಳೂರು ನಗರದ ನೂತನ ಕಾರ್ಯದರ್ಶಿಯನ್ನಾಗಿ ಅಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಎಂ.ಎಸ್.ಹರೀಶ್, ಬೆಂಗಳೂರು ನಗರದ ಪ್ರಧಾನ ಕಾರ್ಯದರ್ಶಿ ಸುಂದ್ರೇಶ್ ನರ್ಗಲ್, ನಗರ ಸಂಘಟನಾ ಕಾರ್ಯದರ್ಶಿ ಅಮರನಾಥ್ ಹಾಗೂ ಇನ್ನಿತರ ಶ್ರೀರಾಮ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.


0 Comments:
Post a Comment
Subscribe to Post Comments [Atom]
<< Home